ಕಾಸರಗೋಡು: ಕಲ್ಲಿಕೋಟೆ ಕೊಯಿಲಾಂಡಿ ಬಸ್ ನಿಲ್ದಾಣದಲ್ಲಿ ಕಾರ್ಯವೆಸಗುತ್ತಿರುವ ವಿಕೆ ಸ್ಟಾಲ್ ಎಂಬ ಹೆಸರಿನ ಲಾಟರಿ ಟಿಕೆಟ್ ಮಾರಾಟದಂಗಡಿಯಿಂದ ಓಣಂ ಬಂಪರ್ ಸೇರಿದಂತೆ ೫೭ ಲಾಟರಿ ಟಿಕೆಟ್ ಕದ್ದ ಪ್ರಕರಣದ ಆರೋಪಿಯಾಗಿರುವ ಕಾಸರಗೋಡು ನಿವಾಸಿಯನ್ನು ಕೊಯಿಲಾಂಡಿ ಪೊಲೀಸರು ಬಂಧಿಸಿದ್ದಾರೆ. ಕಾಸರಗೋಡು ನಿವಾಸಿ ಅಬ್ಬಾಸ್ (56) ಬಂಧಿತ ಆರೋಪಿ. ಕಳೆದ ಆದಿತ್ಯವಾರ ಈ ಸ್ಟಾಲ್ನಲ್ಲಿ ಕಳವು ನಡೆದಿರುವುದಾಗಿ ಸಿಬ್ಬಂದಿ ಮುಸ್ತಫ ನೀಡಿದ ದೂರಿನಂತೆ ಕೊಯಿಲಾಂಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಒಟ್ಟು 28,500 ರೂ. ಮೌಲ್ಯದ ಲಾಟರಿ ಟಿಕೆಟ್ ಕಳವುಗೈಯ್ಯಲಾಗಿದೆಯೆಂದು ದೂರಿನಲ್ಲಿ ತಿಳಿಸಲಾಗಿದೆ. ಅದರಂತೆ ಪರಿಸರದ ಸಿಸಿ ಟಿವಿ ದೃಶ ಪೊಲೀಸರು ಪರಿಶೀಲಿಸಿದಾಗ ಆರೋಪಿಯನ್ನು ಪತ್ತೆಹಚ್ಚಲು ಸಾಧ್ಯವಾಯಿತು. ಅದರ ಆಧಾರದಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
