ಕಾಸರಗೋಡು: ಅಕ್ಟೋಬರ್ 28ರಿಂದ ನವಂಬರ್ 2ರ ವರೆಗೆ ಬೆಂಗಳೂರಿನಲ್ಲಿ ನಡೆದ ರಾಷ್ಟ್ರೀಯ ಜ್ಯೂನಿಯರ್ ತೈಕೋಂಡಾ ಚಾಂಪ್ಯನ್‌ಶಿಪ್‌ನಲ್ಲಿ ವಿದ್ಯಾನಗರ ಪಡುವಡ್ಕದ ಎ.ಎಂ. ಫಾತಿಮಳಿಗೆ ಚಿನ್ನದ ಪದಕ ಲಭಿಸಿದೆ. ಈ ಬಾರಿ ಕೇರಳ ತೈಕೋಂಡಾ ತಂಡಕ್ಕೆ ಸಮಗ್ರ ಪ್ರಶಸ್ತಿ ಲಭಿಸಿರುತ್ತದೆ. ತೈಕೋಂಡಾ ದಲ್ಲಿ ರಾಜ್ಯಮಟ್ಟದಲ್ಲಿ ನಿರಂತರ ೬ನೇ ಬಾರಿ ಚಿನ್ನದ ಪದಕ ಗೆಲ್ಲುವ ಮೂಲಕ ಫಾತಿಮ ಈ ಬಾರಿ ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ದ್ದಳು. ರಾಜ್ಯದಲ್ಲಿ ಚಿನ್ನದ ಪದಕ ಗಳಿ ಸಿದ ಮೊದಲ ಎರಡು ಬಾರಿಯೂ ಕೊರೋನ ರೋಗ ತೀವ್ರಗೊಂಡಿದ್ದ ಕಾಲವಾಗಿದ್ದುದರಿಂದ ಫೆಡರೇಶನ್ ರಾಷ್ಟ್ರೀಯ ಮಟ್ಟದ ಸ್ಪರ್ಧೆಗಳನ್ನು ಹಮ್ಮಿಕೊಂಡಿರಲಿಲ್ಲ. ಇದರಿಂದ ಅದರಲ್ಲಿ ಭಾಗವಹಿಸುವ ಅವಕಾಶ ಪಾತಿಮಳಿಗೆ ಲಭಿಸಿರಲಿಲ್ಲ. ಕೊರೋನ ಬಳಿಕ ನಡೆದ ರಾಷ್ಟ್ರೀಯ ಸ್ಕೂಲ್ ಗೇಮ್ಸ್ ತೈಕೋಂಡಾ ಚಾಂಪ್ಯನ್ ಶಿಪ್‌ನಲ್ಲಿ ಕಂಚಿನ ಪದಕ ಗಳಿಸಿದ್ದಳು.
ಖೇಲೋ ಇಂಡಿಯಾ ದಕ್ಷಿಣ ವಲಯ ಸ್ಪರ್ಧೆಗಳಲ್ಲಿ ಚಿನ್ನ, ರಾಷ್ಟ್ರೀಯ ಮಟ್ಟದಲ್ಲಿ ಕಂಚಿನ ಪದಕ ಲಭಿಸಿತ್ತು. ತೈಕೋಂಡಾ ಫೆಡರೇಶನ್ ಆಫ್ ಇಂಡಿಯಾ ನಡೆಸಿದ ನೇಶನಲ್ ಚಾಂಪ್ಯನ್ ಶಿಪ್‌ನಲ್ಲೂ, ರಾಷ್ಟ್ರೀಯ ಸ್ಕೂಲ್ ಗೇಮ್ಸ್‌ನಲ್ಲೂ ಫಾತಿಮಳಿಗೆ ಬೆಳ್ಳಿ ಪದಕ ಲಭಿಸಿದೆ. ದಿ| ನ್ಯಾಯವಾದಿ ಅಶ್ರಫ್-ಜಮೀಲ ದಂಪತಿಯ ಪುತ್ರಿಯಾದ ಫಾತಿಮ ತನ್‌ಬೀಹುಲ್ ಇಸ್ಲಾಂ ಹೈಯರ್ ಸೆಕೆಂಡರಿ ಶಾಲೆಯ ಪ್ಲಸ್-ಟು ವಿದ್ಯಾರ್ಥಿನಿಯಾಗಿದ್ದಾಳೆ.







