ಕಾಸರಗೋಡು: ಕಾಸರಗೋಡು ಉಪಜಿಲ್ಲಾ ಶಾಲಾ ಕಲೋತ್ಸವ ಕಾಸರಗೋಡು ಜಿಎಚ್‌ಎಸ್‌ಎಸ್‌ನಲ್ಲಿ ಶಾಸಕ ಎನ್.ಎ. ನೆಲ್ಲಿಕುನ್ನು ಉದ್ಘಾಟಿಸಿದರು. ನಗರಸಭಾ ಅಧ್ಯಕ್ಷ ಅಬ್ಬಾಸ್ ಬೀಗಂ ಅಧ್ಯಕ್ಷತೆ ವಹಿಸಿದರು. ಕೇರಳ ಫೋಕ್ಲೋರ್ ಅಕಾಡೆಮಿ ಪ್ರಶಸ್ತಿ ವಿಜೇತ ಸುರೇಶ್ ಪಳ್ಳಿಪ್ಪಾರ ಮುಖ್ಯ ಅತಿಥಿಯಾಗಿದ್ದರು. ನಗರಸಭಾ ಉಪಾಧ್ಯಕ್ಷೆ ಶಂಸೀದಾ ಫಿರೋಸ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಸಾಹಿರ್ ಆಸಿಫ್, ಖಾಲಿದ್ ಪಚ್ಚಕ್ಕಾಡ್, ಕೆ. ರಜನಿ, ಕೌನ್ಸಿಲರ್ ರಂಜಿತ, ವಿ.ಎಸ್. ಬಿಜುರಾಜ್, ರೋಜಿ ಜೋಸೆಫ್, ಪಿ. ಪ್ರಕಾಶನ್, ಉಪಜಿಲ್ಲಾ ಶಿಕ್ಷಣ ಅಧಿಕಾರಿ ಅಗಸ್ಟಿನ್ ಬರ್ನಾಡ್ ಮೊಂತೇರೊ, ಪಿಟಿಎ ಅಧ್ಯಕ್ಷ ಎನ್.ಕೆ. ಉದಯಕುಮಾರ್, ಆನ್ಸಿ ಮ್ಯಾಥ್ಯು, ವಿ.ಜಿ. ವಿನ್ಸಿ, ಎನ್.ಎ. ಅಬೂಬಕ್ಕರ್ ಹಾಜಿ, ಸಿ.ಕೆ. ಅಬ್ದುಲ್ಲ, ಮರ್ಚೆಂಟ್ಸ್ ಅಸೋಸಿಯೇಶನ್ ಅಧ್ಯಕ್ಷ ಟಿ.ಎ. ಇಲ್ಯಾಸ್, ರೋಟರಿ ಕ್ಲಬ್ ಅಧ್ಯಕ್ಷ ನಿಹಾಲ್ ಜೋಯ್, ಪ್ರೆಸ್‌ಕ್ಲಬ್ ಕಾರ್ಯದರ್ಶಿ ಪ್ರದೀಪ್ ನಾರಾಯಣನ್, ಎಚ್.ಎಂ. ಫಾರಂ ಸಂಚಾಲಕ ಕೆ. ವಿಜಯನ್, ಟಿ.ವಿ. ನಾರಾಯಣನ್, ಬಿ. ಉಷಾ ಕುಮಾರಿ, ಎನ್. ಅಬ್ದುಲ್ ರಹಿಮಾನ್, ವಿ.ಪಿ. ಜ್ಯೋತಿಷ್ ಕುಮಾರ್ ಭಾಗವಹಿಸಿದರು. ಪ್ರಾಂಶುಪಾಲ ಪಿ.ಕೆ. ಸುನಿಲ್ ಸ್ವಾಗತಿಸಿ, ಸಮಿತಿ ಸಂಚಾಲಕ ಅಶೋಕನ್ ಕುಣಿಯೇರಿ ವಂದಿಸಿದರು.







