ಕನ್ನಡ ಗ್ರಾಮದಲ್ಲಿ ಕೇರಳ-ಕರ್ನಾಟಕ ಕನ್ನಡ ರಾಜ್ಯೋತ್ಸವ 4ರಂದು: ಸಿದ್ಧತಾ ಸಭೆ

ಕಾಸರಗೋಡು: ಕೇರಳ- ಕರ್ನಾಟಕ ಕನ್ನಡ ರಾಜ್ಯೋತ್ಸವ, ಕಾಸರಗೋಡು ಕನ್ನಡ ಗ್ರಾಮೋತ್ಸವ ,ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಕನ್ನಡ ಗ್ರಾಮ ಕಾಸರಗೋಡು ಇದರ 35ನೇ ಸಂಸ್ಥಾಪನಾ ದಿನಾಚರಣೆ ಹಾಗೂ ಕನ್ನಡ ಗ್ರಾಮದ ಸಂಸ್ಥಾಪಕ ಶಿವರಾಮ ಕಾಸರಗೋಡು ಅವರ 60ನೇ ವರ್ಷದ ಜನ್ಮದಿನೋತ್ಸವ ಕಾರ್ಯಕ್ರಮ ನವಂಬರ್ 4ರಂದು ನಡೆಯಲಿದೆ. ಅಂದು ಬೆಳಿಗ್ಗೆ 10ಕ್ಕೆ ಧ್ವಜಾರೋಹಣ, ಶಿವರಾಮ ಕಾಸರಗೋಡು 60 ಫೊಟೋ ಗ್ಯಾಲರಿ ಉದ್ಘಾಟನೆ, ಕಾಸರಗೋಡು ಕರ್ನಾಟಕದೊಂದಿಗೆ ವಿಲೀನೀಕರಣಕ್ಕಾಗಿ ಹೋರಾಡಿದ 60 ಮಂದಿ ಕನ್ನಡ ಸತ್ಯಾಗ್ರಹಿಗಳ, ಹೋರಾಟಗಾರರ ಭಾವಚಿತ್ರಕ್ಕೆ ಪುಷ್ಪ ನಮನ, ನುಡಿ ನಮನ ನಡೆಯಲಿದೆ.
11 ಗಂಟೆಗೆ ಕೇರಳ ಕರ್ನಾಟಕ ಕನ್ನಡ ರಾಜ್ಯೋತ್ಸವ ಕಾಸರಗೋಡು ಕನ್ನಡ ಗ್ರಾಮೋತ್ಸವದ ಉದ್ಘಾಟನೆ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಪೂರ್ವಾಧ್ಯಕ್ಷ ಡಾ. ಸಿ. ಸೋಮಶೇಖರ ಅಧ್ಯಕ್ಷತೆ ವಹಿಸುವರು. ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಇದರ ಪ್ರಸಾರಾಂಗದ ವತಿಯಿಂದ ಬಹು ಸಂಸ್ಕೃತಿಯ ಕಾಸರಗೋಡು- ರಾಜ್ಯ ಮಟ್ಟದ ವಿಚಾರಗೋಷ್ಠಿ, ರಾಜ್ಯ ಮಟ್ಟದ ಬಹುಭಾಷಾ ಕವಿಗೋಷ್ಠಿ, ಕಾಸರಗೋಡು ಕನ್ನಡಿಗ- ಗಡಿನಾಡು ಹೊರನಾಡು ಕನ್ನಡಿಗ -ಕರ್ನಾಟಕ ಸರಕಾರ- ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ ನಡೆಯಲಿದೆ.
ಸಂಜೆ ಗಂಟೆ 4ಕ್ಕೆ ಶಿವರಾಮ ಕಾಸರಗೋಡು 60ನೇ ಜನ್ಮ ದಿನಾ ಚರಣೆ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ. ಕನ್ನಡ ಗ್ರಾಮಡಲ್ಲಿ ಗೋ-ಕುಟೀರಕ್ಕೆ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಭೂಮಿ ಪೂಜೆ ನೆರವೇರಿಸಲಿದ್ದಾರೆ. ಜೆ. ಕೃಷ್ಣ ಪಾಲೆಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ .ಮುಖ್ಯ ಅತಿಥಿಗಳಾಗಿ ಶಾಸಕ ಎನ್. ಎ ನೆಲ್ಲಿಕುನ್ನು, ವಾಟಾಳ್ ನಾಗರಾಜ್ ಬೆಂಗಳೂರು, ಸಿ .ಎನ್ ಅಶೋಕ ಚನ್ನರಾಯಪಟ್ಟಣ, ಡಾ. ಎಂ. ಜಿ .ಆರ್ ಅರಸ್, ವಿಶ್ವ ರಾಮಕ್ಷತ್ರಿಯ ಮಹಾ ಸಂಘದ ಅಧ್ಯಕ್ಷ ಎಚ್. ಆರ್ ಶಶಿಧರ್ ನಾಯ್ಕ್, ಟಿ.ಎಂ ಶಾಹಿದ್ ತೆಕ್ಕಿಲ್, ಗೋಪಾಲಕೃಷ್ಣ ಕೂಡ್ಲು ಭಾಗವಹಿಸಲಿದ್ದಾರೆ.
ಈ ಸಂದರ್ಭದಲ್ಲಿ 60 ಮಂದಿ ಕನ್ನಡದ ಸಾಧಕರಿಗೆ ‘ಕೇರಳ- ಕರ್ನಾಟಕ ಕನ್ನಡ ರಾಜ್ಯೋತ್ಸವ ಪ್ರಶಸ್ತಿ’ ಮತ್ತು ಕಾಸರಗೋಡು ಕನ್ನಡ ಗ್ರಾಮೋತ್ಸವ ಪ್ರಶಸ್ತಿ ಪ್ರದಾನ, ಸುಮಾರು 60 ಕಲಾವಿದರ ಸಾಂಸ್ಕೃತಿಕ ಸಂಭ್ರಮ ನಡೆಯಲಿದೆ.
ಈ ಬಗ್ಗೆ ಕನ್ನಡ ಗ್ರಾಮದಲ್ಲಿ ನಡೆದ ಸಿದ್ಧತಾ ಸಭೆಯ ಅಧ್ಯಕ್ಷತೆಯನ್ನು ಕಾಸರಗೋಡು ನಗರಸಭಾ ಕೌನ್ಸಿಲರ್ ಶಾರದಾ .ಬಿ ವಹಿಸಿದ್ದರು . ಶಿವರಾಮ ಕಾಸರಗೋಡು, ಕೆ .ಎನ್ ವೆಂಕಟ್ರಮಣ ಹೊಳ್ಳ, ಕೆ .ನಿರಂಜನ ಕೊರಕ್ಕೋಡು, ರಾಧಾಕೃಷ್ಣ.ಕೆ ಉಳಿಯತ್ತಡ್ಕ, ಜಯಾ ನಂದ ಕುಮಾರ್ ಹೊಸದುರ್ಗ, ಕೆ. ಗುರುಪ್ರಸಾದ್ ಕೋಟೆಕಣಿ, ಕೆ. ಮುರಳೀಧರ ಪಾರೆಕಟ್ಟೆ, ಕೆ . ಜಗದೀಶ ಕೂಡ್ಲು, ಯೋಗೀಶ್ ಕೋಟೆಕಣಿ, ಶ್ವೇತಾ ಯೋಗೀಶ್, ನಾರಾಯಣ ನಾಯ್ಕ್ ಪೆರ್ನೆ, ಕುಶಲ ಕುಮಾರ್. ಕೆ, ಶ್ರೀಕಾಂತ್ ಕಾಸರಗೋಡು, ಉಪಸ್ಥಿತರಿದ್ದರು .

You cannot copy contents of this page