ಬದಿಯಡ್ಕ: ಕೇರಳ ಮರಾಟಿ ಶಾರದೋತ್ಸವ ಸಮಿತಿಯ 18ನೇ ವರ್ಷದ ಶಾರದೋತ್ಸವ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಬದಿಯಡ್ಕ ಶ್ರೀ ಗುರುಸದನದಲ್ಲಿ ಜರಗಿತು. ವಿಗ್ರಹ ಪ್ರತಿಷ್ಠೆ, ಪೂಜೆ, ಮಹಾಗಣಪತಿ ಹೋಮ, ವಿವಿಧ ಭಜನ ಸಂಘ ಗಳಿಂದ ಭಜನೆ. ಧ್ವಜಾರೋಹಣ, ಆಯುಧ ಪೂಜೆ ಜರಗಿತು. ಮಕ್ಕಳ ಕಲಾ ಸಾಂಸ್ಕೃತಿಕ ಕಾರ್ಯಕ್ರಮ, ಸಭಾ ಕಾರ್ಯಕ್ರಮ, ಸನ್ಮಾನ ಸಮಾರಂಭ, ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ, ಮಹಾಪೂಜೆ, ಅನ್ನ ಸಂತರ್ಪಣೆ, ಭಕ್ತಿಗೀತೆ, ಭರತನಾಟ್ಯ, ಸಮೂಹ ನೃತ್ಯ, ಮರಾಟಿ ಭಾಷೆಯಲ್ಲಿ ಭಾಷಣ, ಮಿಮಿಕ್ರಿ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿತು. ಶ್ರೀ ಶಾರದಾಂಬ ಯಕ್ಷಗಾನ ಕಲಾಸಂಘ ಬದಿಯಡ್ಕ ಇವರಿಂದ ಯಕ್ಷಗಾನ ಬಯಲಾಟ ಶ್ವೇತಕುಮಾರ ಚರಿತ್ರೆ ಪ್ರದರ್ಶನಗೊಂಡಿತು. ಮಹಿಳಾ ಸಮಿತಿಯ ವತಿಯಿಂದ ತಿರುವಾದಿರ ನೃತ್ಯ, ಸಮಾರೋಪ ಸಮಾರಂಭ, ಪ್ರಶಸ್ತಿ ಪ್ರಧಾನ, ಮಹಾಪೂಜೆ, ಶ್ರೀ ಶಾರದಾ ದೇವಿಯ ಶೋಭಯಾತ್ರೆ ಜರಗಿತು.
