ಕೇರಳವನ್ನು ಕಡುಬಡತನಮುಕ್ತ ರಾಜ್ಯವಾಗಿ ವಿದ್ಯುಕ್ತ  ಘೋಷಣೆ

. ರಾಜ್ಯ ನವಯುಗದ ಹೊಸ್ತಿಲಲ್ಲಿ-ಮುಖ್ಯಮಂತ್ರಿ . ವಿಶೇಷ ಅಧಿವೇಶನವನ್ನು

. ಬಹಿಷ್ಕರಿಸಿ ವಿಧಾನಸಭೆಯ ಹೊರಗೆ ಧರಣಿ ಮುಷ್ಕರ ನಡೆಸಿದ ವಿಪಕ್ಷ

ತಿರುವನಂತಪುರ: ಕೇರಳವನ್ನು ಕಡುಬಡತನಮುಕ್ತ ರಾಜ್ಯವನ್ನಾಗಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಇಂದು ನಡೆದ ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ವಿದ್ಯುಕ್ತವಾಗಿ ಘೋಷಿಸಿದರು.

ಕೇರಳ ರಾಜ್ಯ ರೂಪೀಕರಣ ದಿನ ವಾದ ಇಂದೇ ಈ ಘೋಷಣೆ  ಮೊಳ ಗಿಸಲಾಗಿದೆಯೆಂಬ ವಿಶೇಷತೆಯೂ ಇದಕ್ಕಿದೆ. ಕೇರಳವನ್ನು ಕಡುಬಡತನ ಮುಕ್ತ ರಾಜ್ಯವನ್ನಾಗಿ ಘೋಷಿಸಲು ಹಾಗೂ ರಾಜ್ಯ ಸರಕಾರ ಈತನಕ ಜ್ಯಾರಿಗೊಳಿಸಿರುವ ಅಭಿವೃದ್ಧಿ ಯೋಜನೆಗಳ ಬಗ್ಗೆ ಸಂಕ್ಷಿಪ್ತ ರೂಪದ ಮಾಹಿತಿ ನೀಡುವ ಸಲುವಾಗಿಯೇ ವಿಧಾನಸಭಯ ಇಂದಿನ ಈ ವಿಶೇಷ ಅಧಿವೇಶನವನ್ನು ಕರೆಯಲಾಗಿದೆ. ಈ ವಿಶೇಷ ಅಧಿವೇಶನ ಇಂದು ಬೆಳಿಗ್ಗೆ 9 ಗಂಟೆಗೆ ಆರಂಭಗೊಂಡಿತು. ಇದರಲ್ಲಿ ಕೇರಳವನ್ನು  ಕಡು ಬಡತನಮುಕ್ತ ರಾಜ್ಯವನ್ನಾಗಿ ಘೋಷಿಸಲು ಮುಖ್ಯ ಮಂತ್ರಿ ತೊಡಗಿದಾಗ ವಿರೋಧಪಕ್ಷ ನಾಯಕ ವಿ.ಡಿ.ಸತೀಶನ್ ಅದನ್ನು ತೀವ್ರವಾಗಿ ವಿರೋಧಿಸಿದರು. ಮಾತ್ರವಲ್ಲ ಈ ವಿಷಯದಲ್ಲಿ ಸರಕಾರದೊಡಗೆ ಸಹಕರಿಸಲು ನಮಗೆ ಸಾಧ್ಯವಾಗದು. ಕೇರಳವನ್ನು  ಕಡುಬಡತನಮುಕ್ತ ರಾಜವನ್ನಾಗಿ ಘೋಷಿಸುವುದು ಕೇವಲ ಕಪಟತನವಾಗಿದೆ ಎಂದು ಅವರು ಹೇಳಿದರು.

ಕಡುಬಡತನಮುಕ್ತ ರಾಜ್ಯವನ್ನಾಗಿ ಘೋಷಿಸುವ ಉದ್ದೇಶದಿಂದ ಮಾತ್ರವಾಗಿ ಈ ವಿಶೇಷ ಅಧಿವೇಶನ ಕರೆದಿರುವುದು ಸದನದ ಕಾನೂನಿನ ಉಲ್ಲಂಘನೆಯಾಗಿದೆಯೆಂದು ವಿರೋಧಪಕ್ಷದವರು ಟೀಕಿಸಿದರು.  ಮಾತ್ರವಲ್ಲ ಸದನದಲ್ಲಿ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಅಧಿವೇಶನವನ್ನು ಬಹಿಷ್ಕರಿಸಿ ಹೊರ ನಡೆದರು.  ನಂತರ ವಿಧಾನಸಭೆಯ ಹೊರಗೆ ಮೆಟ್ಟಿಲುಗಳಲ್ಲಿ ಕುಳಿತು ಧರಣಿ ಮುಷ್ಕರ ಹೂಡಿದರು.

ಕೇರಳವನ್ನು ಕಡುಬಡತನಮುಕ್ತ ರಾಜ್ಯವನ್ನಾಗಿ ಸದನದಲ್ಲಿ ಮುಖ್ಯಮಂತ್ರಿ ವಿದ್ಯುಕ್ತವಾಗಿ ಘೋಷಿಸಿದರು. ಕೇರಳ ಇಂದು ನವಯುಗದ ಹೊಸ್ತಿಲಿಗೆ ಕಾಲಿರಿಸಿದೆ. ನೀಡುವ ಭರವಸೆಗಳನ್ನೆಲ್ಲ ಪಾಲಿಸುವ ಸರಕಾರವಾಗಿದೆ. ನಮ್ಮದು. ಅದನ್ನು ನಾವು ಶೇಕಡಾ 100ರಷ್ಟು ಪಾಲಿಸುತ್ತಾ ಬಂದಿದ್ದೇವೆ ಮಾತ್ರವಲ್ಲ ಅದಕ್ಕೆ ನಾವು ಕಠಿಬದ್ಧತೆಯನ್ನು ಹೊಂದಿದ್ದೇವೆಂದು ಮುಖ್ಯಮಂತ್ರಿ ಹೇಳಿದ್ದಾರೆ.

RELATED NEWS

You cannot copy contents of this page