ತಿರುವನಂತಪುರ: 63,106 ಕುಟುಂಬಗಳಿಗೆ ಸುರಕ್ಷಿತ ಮನೆ, ಆಹಾರ, ಔಷಧಿ ಖಚಿತಪಡಿಸಿ ಕಡು ಬಡವರಿಲ್ಲದ ರಾಜ್ಯವೆಂಬ ಗುರಿಯತ್ತ ಕೇರಳ ಸಾಗುತ್ತಿದೆ. ಈ ಹಿಂದೆ ರಾಜ್ಯದಲ್ಲಿ 64,006 ಕುಟುಂಬಗ ಳನ್ನು ಕಡುಬಡವರಿದ್ದಾರೆಂದು ಪತ್ತೆಹಚ್ಚಲಾಗಿತ್ತು. 1,30,009 ಮಂದಿ ಆದರಲ್ಲಿ ಒಳಗೊಂಡಿದ್ದರು. ಇನ್ನುಳಿದ 900 ಕುಟುಂಬಗಳನ್ನು ಎರಡು ವಾರದೊಳಗೆ ಬಡತನ ಮುಕ್ತವಾಗಿಸಿ ನವಂಬರ್ 1ರಂದು ಕಡುಬಡವರ ರಹಿತ ರಾಜ್ಯವಾಗಿ ಘೋಷಿಸಲು ಸರಕಾರ ಗುರಿಯಿರಿಸಿದೆ. ಕಾಸರಗೋಡು, ಕಣ್ಣೂರು, ಕೋಟ್ಟಯಂ ಜಿಲ್ಲೆಗಳನ್ನು ಕಡು ಬಡತನಮುಕ್ತ ಜಿಲ್ಲೆಗಳಾಗಿ ಘೋಷಿಸಲಾಗಿದೆ. ಕಡುಬಡ ಕುಟುಂಬಗಳ ಪೈಕಿ 4687 ಕುಟುಂಬಗಳಿಗೆ ಲೈಫ್ ಯೋಜನಯಿಂದ
ಮನೆ ಮಂಜೂರು ಮಾಡಲಾಗಿದೆ. 4675 ಕುಟುಂಬಗಳು ಸ್ಥಳೀಯಾಡಳಿತ ಸಂಸ್ಥೆಗಳೊAದಿಗೆ ಒಪ್ಪಂ ದಕ್ಕೆ ಸಹಿ ಹಾಕಿದೆ. ಈ ಪೈಕಿ 31913 ಮನೆಗಳು ಪೂರ್ತಿಗೊಂಡಿವೆ. ಉಳಿದ ಮನೆಗಳು ನಿರ್ಮಾಣ ಹಂತದಲ್ಲಿವೆ.