ತಿರುವನಂತಪುರ: ತಿರುವನಂ ತಪುರದಲ್ಲಿರುವ ಕೇರಳ ‘ರಾಜ್ ಭವನ್’ನ ಹೆಸರನ್ನು ‘ಲೋಕ್‌ಭವನ್’ ಆಗಿ ಬದಲಾಯಿಸಲಾಗಿದೆ. ಇದರ ಜತೆಗೆ ಭಾರತದ ಹಲವು ರಾಜ್ಯಗಳ ರಾಜ್‌ಭವನಗಳ ಹೆಸರುಗಳು ಕೂಡಾ ಲೋಕ್‌ಭವನ್ ಆಗಿ ನಿನ್ನೆಯಿಂದ ಮಾರ್ಪಟ್ಟಿದೆ.
ಲೆಫ್ಟಿನೆಂಟ್ ಗವರ್ನರ್‌ಗಳ ಔದ್ಯೋಗಿಕ ವಸತಿ ಹಾಗೂ ಕಚೇ ರಿಯೂ ಆಗಿರುವ ರಾಜ್‌ಭವನ್ ಗಳ ಹೆಸರನ್ನು ಲೋಕ್ ಭವನ್ ಆಗಿ ಮರುನಾಮಕರಣಗೊಳಿಸುವಂತೆ ಕೇಂದ್ರ ಗೃಹಖಾತೆ ದೇಶದ ಎಲ್ಲಾ ರಾಜ್ಯಗಳಿಗೂ ನಿರ್ದೇಶ ನೀಡಿದ್ದು, ಅದರ ಪ್ರಕಾರ ಕೇರಳ ರಾಜ್‌ಭವನದ ಹೆಸರನ್ನು ಬದಲಿಸಿ ಲೋಕ್ ಭವನ್ ಎಂದು ಮರುನಾಮಕರಣಗೊಳಿಸಿದ ಫಲಕವನ್ನು ನಿನ್ನೆ ಅಳವಡಿಸಲಾಗಿದೆ. ಇದರಂತೆ ಲೋಕ್ ಭವನದ ಮೊದಲ ಅತಿಥಿಯಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ನಾಳೆ ಆಗಮಿಸಲಿದ್ದಾರೆ.
ರಾಜ್ ಭವನದ ಹೆಸರನ್ನು ಲೋಕ್ ಭವನ್ ಆಗಿ ಪರಿವರ್ತನೆ ನಡೆಸಿರುವುದು ವಸಾಹತುಶಾಹಿ ಮನೋಭಾವದಿಂದ ಪ್ರಜಾತಂತ್ರ ಮನೋಭಾವಕ್ಕಾಗಿರುವ ಒಂದು ಪ್ರಧಾನ ಬದಾವಣೆಯ ಪ್ರತೀಕವಾಗಿ ದೆಯೆಂದು ಇದೇ ಸಂದರ್ಭದಲ್ಲಿ ಕೇರಳ ರಾಜ್ಯ ಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಹೇಳಿದ್ದಾರೆ.







