ಕುಂಬಳೆ: ಪಂಚಾಯತ್ ಕುಂಬಳೆ ಪೇಟೆ ಅಭಿವೃದ್ಧಿಗಾಗಿ ಏನನ್ನೂ ನಡೆಸಿಲ್ಲವೆಂದು ಕುಂಬಳೆಯ ಮಾಹಿತಿ ಹಕ್ಕು ಕಾರ್ಯಕರ್ತ ಕೇಶವ ನಾಯ್ಕ್ ಕುಂಬಳೆಯಲ್ಲಿ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಆರೋಪಿಸಿದ್ದಾರೆ. ಪೇಟೆಯ ಅಭಿವೃದ್ಧಿಯೆಂದರೆ ಸಂಚಾರ ಪರಿಷ್ಕಾರವಲ್ಲವೆಂದು ಬಸ್ ನಿಲ್ದಾಣವನ್ನು ಬದಿಯಡ್ಕ ರಸ್ತೆಗೆ ಬದಲಿಸಿದ ಕ್ರಮವನ್ನು ಪುನರ್ ಪರಿಶೀಲಿಸಬೇಕೆಂದು ಅವರು ಆಗ್ರಹಿಸಿದರು. ಚಿಕಿತ್ಸೆಗಾಗಿ ಮಂಗಳೂರು, ತಲಶ್ಶೇರಿಗೆ, ಕಲ್ಲಿಕೋಟೆಗೆ ತೆರಳುವ ರೋಗಿಗಳು ಸಹಿತದವರಿಗೆ ರೈಲ್ವೇ ಪ್ರಯಾಣಕ್ಕೆ ಸಾರಿಗೆ ಪರಿಷ್ಕಾರ ಸಂಕಷ್ಟ ತಂದಿದೆಯೆಂದು ಅವರು ದೂರಿದರು. ಈಗ ಬಸ್‌ನಿಂದ ಇಳಿದು ರೈಲು ನಿಲ್ದಾಣಕ್ಕೆ ಬಹಳ ದೂರ ನಡೆಯಬೇಕಾಗಿ ಬರುತ್ತಿದೆ. ಇದಕ್ಕೆ ಅಲ್ಪ ಪರಿಹಾರವೆಂಬ ನೆಲೆಯಲ್ಲಿ ದೀರ್ಘ ದೂರ ಬಸ್‌ಗಳನ್ನು ಹಳೆ ಬಸ್ ನಿಲ್ದಾಣಕ್ಕೆ ಬರುವಂತೆ ಮಾಡಿ ಪ್ರಯಾಣಿಕರನ್ನು ಇಳಿಸುವ ಹಾಗೂ ಹತ್ತಿಸುವುದಕ್ಕೆ ಕ್ರಮ ಕೈಗೊಳ್ಳುವುದು ಉತ್ತಮ ಎಂದು ಅವರು ಅಭಿಪ್ರಾಯಪಟ್ಟರು.
ಪ್ರಸ್ತುತ ರಸ್ತೆ ಬದಿಯಲ್ಲಿ ನಿರ್ಮಿಸಿರುವುದು ಬಸ್ ಶೆಲ್ಟರ್ ಮಾತ್ರವಾಗಿದೆ.ಶೌಚಾಲಯ ಸಹಿತದ ಎಲ್ಲಾ ಸೌಕರ್ಯಗಳೊಂದಿಗಿನ ಬಸ್ ನಿಲ್ದಾಣ ಕಾಂಪ್ಲೆಕ್ಸ್ ಕೂಡಲೇ ನಿರ್ಮಿಸಿ ಪ್ರಯಾಣಿಕರ ಸಂಕಷ್ಟಗಳಿಗೆ ಪರಿಹಾರ ಕಾಣಬೇಕೆಂದು ಅವರು ಆಗ್ರಹಿಸಿದರು.
ಕುಂಬಳೆ ಪೇಟೆ ಅಭಿವೃದ್ಧಿಯನ್ನು ಸಾಕ್ಷಾತ್ಕಾರಗೊಳಿಸದಿರುವುದಕ್ಕೆ ರಾಜಕೀಯ ಪಕ್ಷಗಳ ನಿಷ್ಕ್ರಿಯತೆ ಯನ್ನು ಅವರು ಖಂಡಿಸಿದರು. ಪೇಟೆಯ ಅಭಿವೃದ್ಧಿಗೆ ಜನಪರ ಸಮಿತಿ ರೂಪೀಕರಿಸಿ ಕಾರ್ಯಾಚರಿ ಸಲು ಜನರು ಮುಂದಾಗಬೇಕೆಂದು, ಪೇಟೆಯ ವಾರ್ಡ್‌ನಲ್ಲಿ ತಾನು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವೆ ನೆಂದು, ಜಯಗಳಿಸಿದರೆ ಅಭಿವೃದ್ಧ್ಧಿ ಯೆಂದರೆ ಏನೆಂದು ತೋರಿಸಿಕೊಡು ವುದಾಗಿಯೂ ಅವರು ನುಡಿದರು.







