ಬದಿಯಡ್ಕ: ಪ್ರಸಿದ್ಧ ಕವಿ ನಾಡೋಜ ದಿ| ಕಯ್ಯಾರ ಕಿಂಞಣ್ಣ ರೈಯವರ ಪುತ್ರ ಬದಿಯಡ್ಕ ಕಲ್ಲಕಳಿಯ ನಿವಾಸಿ ಕೃಷ್ಣ ಪ್ರದೀಪ್ ರೈ (62) ನಿಧನ ಹೊಂದಿದರು. ನಿನ್ನೆ ಬೆಳಿಗ್ಗೆ 10.30ರ ವೇಳೆ ಮನೆಯಲ್ಲಿ ಅಸ್ವಸ್ಥರಾಗಿ ನಿಧನ ಸಂಭವಿಸಿದೆ. ಮೃತರು ಪತ್ನಿ ಆರತಿ, ಪುತ್ರಿ ಪ್ರಕೃತಿ, ಸಹೋದರರಾದ ದುರ್ಗಾಪ್ರಸಾದ್ ರೈ, ಜಯಶಂಕರ ರೈ, ಶ್ರೀರಂಗ ನಾಥ್ ರೈ, ಪ್ರಸನ್ನ ರೈ, ರವಿರಾಜ್ ರೈ, ಸಹೋದರಿಯರಾದ ದೇವಕಿ ದೇವಿ, ಕಾವೇರಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.
ನಿಧನಕ್ಕೆ ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ, ಪ್ರದೀಪ್ ಕುಮಾರ್ ಕಲ್ಕೂರ, ಪತ್ರಕರ್ತರ ಸಂಘದ ಆರ್. ಸುಬ್ಬಯ್ಯಕಟ್ಟೆ, ಅಖಿಲೇಶ್ ನಗುಮುಗಂ, ರವಿ ನಾಯ್ಕಾಪು, ಚನಿಯಪ್ಪ ನಾಯ್ಕ, ಪ್ರೊ| ಶ್ರೀನಾಥ್ ಸಂತಾಪ ಸೂಚಿಸಿದ್ದಾರೆ.







