ವರ್ಕಾಡಿ: ಕೊಂಡೆವೂರು ಶ್ರೀ ಅನಂತ ಪದ್ಮನಾಭ ದೇವಸ್ಥಾನ ಇದರ ಮಹಾಸಭೆ ಇತ್ತೀಚೆಗೆ ದೇವಸ್ಥಾನದ ವಠಾರದಲ್ಲಿ ನಡೆಯಿತು. ಸೇವಾ ಟ್ರಸ್ಟ್ನ ಅಧ್ಯಕ್ಷ ಸೋಮನಾಥ ಕಾರಂತ ಅಧ್ಯಕ್ಷತೆ ವಹಿಸಿದರು. ಆಡಳಿತ ಮೊಕ್ತೇಸರ ಐತಪ್ಪ ಶೆಟ್ಟಿ ದೇವಂದಪಡ್ಪು, ಟ್ರಸ್ಟ್ನ ಸದಸ್ಯ ದೇವಪ್ಪ ಶೆಟ್ಟಿ ಚಾವಡಿಬೈಲು ಗುತ್ತು, ಪಾವೂರು ಪೊಯೈ ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಅಧ್ಯಕ್ಷ ಮನೋಹರ ಶೆಟ್ಟಿ ಕೆದುಂಬಾಡಿ, ಹಿರಿಯರಾದ ಶ್ಯಾಮ್ ಭಟ್ ಕೆದುಂ ಬಾಡಿ, ಚಂದ್ರಹಾಸ ಪೂಜಾರಿ ಮುಡಿಮಾರು, ಆನಂದ ಬಳ್ಳೂರು, ಪದ್ಮನಾಭ ಅಡ್ಯಂತಾಯ ಕಾಪು, ಅರುಣ್ ಕುಮಾರ್ ಶೆಟ್ಟಿ ಪೆರ್ಮ ನಂಜಿ, ರವಿ ಮುಡಿಮಾರು ಉಪಸ್ಥಿತರಿ ದ್ದರು. ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಜಯಪ್ರಕಾಶ್ ಅಡ್ಯಂತಾಯ ಸ್ವಾಗತಿಸಿ,ಲೆಕ್ಕಪತ್ರ ಮಂಡಿಸಿ ವರದಿ ನೀಡಿದರು. ದೇವಸ್ಥಾನದ ಮುಂದಿನ ಖರ್ಚು ವೆಚ್ಚಗಳನ್ನು ಸರಿಪಡಿಸಲಿಕ್ಕೆ ಆರ್ಥಿಕ ಸಹಕಾರ ಲಭ್ಯವಾಗುವಂತೆ ನಿರ್ಣಯಿಸಲಾಯಿತು. ದೇವಸ್ಥಾನದ ಅಭಿವೃದ್ಧಿ ಕೆಲಸಗಳಿಗೋಸ್ಕರವಾಗಿ ಶ್ರೀ ಅನಂತ ಪದ್ಮನಾಭ ದೇವಸ್ಥಾನ ಅಭಿವೃದ್ಧಿ ಸಮಿತಿ ರೂಪೀಕರಿಸಲಾಯಿತು.
ಗೌರವಾಧ್ಯಕ್ಷರಾಗಿ ಶಾಮ್ ಭಟ್ ಕೆದುಂಬಾಡಿ. ಅಧ್ಯಕ್ಷರಾಗಿ ಮನೋಹರ ಶೆಟ್ಟಿ ಕೆದುಂಬಾಡಿ, ಪ್ರಧಾನ ಕಾರ್ಯದರ್ಶಿಯಾಗಿ ಶಶಾಂಕ್ ಮುಡಿಮಾರ್, ಕೋಶಾಧಿ ಕಾರಿಯಾಗಿ ಪವನ್ ಕುಮಾರ್ ಶೆಟ್ಟಿ ಪೆರ್ಮನಂಜಿ, ಪ್ರಧಾನ ಸಂಚಾಲಕ ರಾಗಿ ರವಿ ಮುಡಿಮಾರು, ಗೌರವ ಸಲಹೆಗಾರರಾಗಿ ಸೋಮನಾಥ ಕಾರಂತ ಮರಿಕಾಪು, ಅರುಣ ಕುಮಾರ್ ಶೆಟ್ಟಿ ಪೆರ್ಮನಂಜಿ, ಐತ್ತಪ್ಪ ಶೆಟ್ಟಿ ದೇವಂದ ಪಡ್ಪು, ದೇವಪ್ಪ ಶೆಟ್ಟಿ ಚಾವಡಿ ಬೈಲು ಗುತ್ತು, ಜಯಪ್ರಕಾಶ್ ಅಡ್ಯಂತಾಯ ಕಾಪು, ಪದ್ಮನಾಭ ಅಡ್ಯಂತಾಯ ಕಾಪು, ಸುಧಾಕರ ಕೆ ಕೊಡ್ಲಮೊಗರು, ದಿನೇಶ್ ಕರ್ಕೇರ ಮುಡಿಮಾರು, ಗಣೇಶ್ ಚೆಂಡೇಲ್, ರವಿ ಮುಡಿಮಾರ್, ವನಜಾಕ್ಷಿ ಪೆರ್ಮನಂಜಿ, ಶಾರದಾ ಪೆವiðನಂಜಿ, ನಯನ್ ಕುಮಾರ್ ದಡ್ಡಂಗಡಿ, ದೀಕ್ಷಾ ಮುಡಿಮಾರ್, ವಿನೋದ್ ಕುಮಾರ್ ಪಾವೂರು. ಗೌರವ ಉಪಾಧ್ಯಕ್ಷರಾಗಿ ಆನಂದ ಬಳ್ಳೂರು, ಚಂದ್ರಹಾಸ ಪೂಜಾರಿ ಮುಡಿಮಾರ್, ಪ್ರವೀಣ್ ಭಂಡಾರಿ ಚಾವಡಿ ಬೈಲು ಗುತ್ತು, ಗಂಗಾಧರ ಶೆಟ್ಟಿ ಕೋರಿ ಮುಗೇರ್, ನವೀನ್ ಮುಡಿಮಾರ್, ವಿಶ್ವನಾಥ ರೈ ಕರುಮುಗೆರ್, ಶಾಂಬ ನಾಯ್ಗ ಕೆದುಂಬಾಡಿ, ಮಾಧವ ಪೂಜಾರಿ ಕುದುಕೋರಿ, ಪ್ರವೀಣ್ ಶೆಟ್ಟಿ ಚಾವಡಿ ಬೈಲು ಗುತ್ತು, ಭೋಜ ಮಾಸ್ಟರ್ ಬಳ್ಳೂರು ಪಾವೂರು, ವಾಮನ ಗೋವಿಂದ ಲಚ್ಚಿಲ್, ರಘು ಮಾಸ್ಟರ್ ಬಳ್ಳೂರು ಪಾವೂರು ಹಾಗೂ ಜೊತೆ ಕಾರ್ಯದರ್ಶಿ, ಕಾರ್ಯಕಾರಿ ಸಮಿತಿಯ ಸದಸ್ಯರನ್ನು ಆರಿಸಲಾಯಿತು.
