ಉಪ್ಪಳ :ಕೂಟ ಮಹಾಜಗತ್ತು ಮಂಗಲ್ಪಾಡಿ ಅಂಗಸ೦ಸ್ಥೆ ಇದರ ಮಹಿಳಾ ವೇದಿಕೆ ಹಾಗೂ ಯುವ ವೇದಿಕೆಯ ಕೂಟ ಯುವಶಕ್ತಿ ಸಂಭ್ರಮ ಕಾರ್ಯಕ್ರಮ ಇತ್ತೀಚಿಗೆ ಐಲ ಶ್ರೀ ದುರ್ಗಾ ಪರಮೇಶ್ವರಿ ಕಲಾ ಭವನದಲ್ಲಿ ನಡೆಯಿತು. ಬೆಳಗ್ಗೆ ವೇದಮೂರ್ತಿ ಅಶೋಕ ನಾವಡರ ಪೌರೋಹಿತ್ಯದಲ್ಲಿ ಗಣಹೋಮದೊಂದಿಗೆ ಕಾರ್ಯಕ್ರಮ ಆರಂಭಗೊ೦ಡಿತು. ಬಳಿಕ ಪುಟಾಣಿಗಳ ರಾಧಾ ಕೃಷ್ಣ ವೇಷ, ಕಲಶ ಹಿಡಿದ ಮಹಿಳೆಯರು ಹಾಗೂ ಸಮಾಜ ಬಾಂಧವರ ಮೆರವಣಿಗೆಯಲ್ಲಿ ಅತಿಥಿಗಳನ್ನು ಸ್ವಾಗತಿಸಲಾಯಿತು. ಯುವ ವೇದಿಕೆಯ ಸದಸ್ಯರ ಸ್ವಾಗತ ಗೀತೆ ಹಾಗೂ ಮಹಿಳಾ ವೇದಿಕೆಯ ಸದಸ್ಯರಿಂದ ತಿರುವಾದಿರ ನೃತ್ಯ ನಡೆಯಿತು. ಕೂಟ ಮಹಾಜಗತ್ತು ಮಂಗಲ್ಪಾಡಿ ಅಂಗಸ೦ಸ್ಥೆಯ ಅಧ್ಯಕ್ಷ ಡಾ.ಗಿರಿಧರ ರಾವ್ ಮಾಣಿಹಿತ್ಲುರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ಐಲ ಶಂಕರನಾರಾಯಣ ಮಯ್ಯ, ಅನಂತ ಮಯ್ಯರ ವೇದಘೋಷ ದೊಂದಿಗೆ ಆರಂಭವಾಯಿತು. ಮಂಗಲ್ಪಾಡಿ ಅಂಗಸ೦ಸ್ಥೆಯ ಕಾರ್ಯದರ್ಶಿ ರಾಧಾಕೃಷ್ಣ ತುಂಗ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು.
ಕೂಟ ಮಹಾ ಜಗತ್ತು ಸಾಲಿಗ್ರಾಮದ ಕೇಂದ್ರಾಧ್ಯಕ್ಷ ಪ್ರಕಾಶ ಕಾರಂತ ದೀಪ ಬೆಳಗಿಸಿ, ಉದ್ಘಾಟಿಸಿದರು. ಕರ್ನಾಟಕೇತರ ಅಂಗಸAಸ್ಥೆಯ ಪ್ರತಿನಿಧಿ, ಕೇಂದ್ರ ಆಡಳಿತ ಸಮಿತಿ ಸಭೆಯ ಕೋಶಾಧಿಕಾರಿ ಮರಿಕಾಪು ಲಕ್ಷ್ಮೀನಾರಾಯಣ ಹೊಳ್ಳ, ಎಚ್.ಸತೀಶ ಹಂದೆ, ಅಕ್ಷತಾ ಗಿರೀಶ್ ಐತಾಳ್, ಕೇಂದ್ರದ ಉಪಾಧ್ಯಕ್ಷ ಸದಾಶಿವ ಐತಾಳ, ಎಂ ಶ್ರೀಧರ ರಾವ್, ಟಿ.ಡಿ.ಸದಾಶಿವ ರಾವ್, ಯುವ ವೇದಿಕೆಯ ಅಧ್ಯಕ್ಷ ಸುಬ್ರಾಯ ಹೊಳ್ಳ ಪೆರಿಂಗಡಿ ಹಾಗೂ ಮಹಿಳಾ ವೇದಿಕೆಯ ಅಧ್ಯಕ್ಷೆ ಶಶಿಕಲಾ ಮಯ್ಯ ಶುಭ ಕೋರಿದರು. ಡಾ.ರಾಘವೇಂದ್ರ ಹೊಳ್ಳ ದಿಕ್ಸೂಚಿ ಭಾಷಣ ಮಾಡಿದÀರು. ಕೂಟ ಮಹಾ ಜಗತ್ತಿನ ಹಿರಿಯ ಮಾರ್ಗದರ್ಶಕರಾಗಿರುವ ಡಾ.ಕೆ.ಪಿ.ಹೊಳ್ಳ ತಮ್ಮ ಅನುಭವವನ್ನು ಹಂಚಿಕೊ೦ಡರು.






