ಮಂಜೇಶ್ವರ: ಹೊಸಂಗಡಿ ಯಲ್ಲಿ ಹಲವಾರು ವರ್ಷಗಳಿಂದ ಕಾರ್ಯಚರಿಸುತ್ತಿರುವ ಕೋಟ್ಟಕ್ಕಲ್ ಆರ್ಯವೈದ್ಯ ಶಾಲಾ ಮಾಲಕ ಚಿಗುರುಪಾದೆ ತೊಟ್ಟೆತ್ತೋಡಿ ನಿವಾಸಿ ಪಿ.ಶೇಷಪ್ಪ ವೈದ್ಯರ್ ಪೆರ್ವಡಿ (74) ಕುಸಿದು ಬಿದ್ದು ನಿಧನ ಹೊಂದಿದರು. ನಿನ್ನೆ ಬೆಳಿಗ್ಗೆ ಸುಮಾರು 11 ಗಂಟೆ ವೇಳೆ ಹೊಸಂಗಡಿಯಲ್ಲಿರುವ ವೈದ್ಯ ಶಾಲೆಯಲ್ಲಿ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಿ ಅಲ್ಲಿಂದ ಮಂ ಗಳೂರು ಆಸ್ಪತ್ರೆಗೆ ತಲುಪಿಸಿದರೂ ನಿಧನ ಹೊಂದಿದರು.
ಮೃತರು ಪತ್ನಿ ತೊಟ್ಟೆತ್ತೋಡಿ ಶಾಲೆಯ ನಿವೃತ್ತ ಅಧ್ಯಾಪಿಕೆ ವಿಜಯಲಕ್ಷಿ÷್ಮÃ, ಸಹೋದರ ಮೋನಪ್ಪ ಮೂಲ್ಯ, ಸಹೋದರಿ ಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಮನೆಗೆ ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ಮಂಜೇಶ್ವರ ಘಟಕ ಅಧ್ಯಕ್ಷ ಬಶೀರ್ ಕನಿಲ, ಜತೆ ಕಾರ್ಯದರ್ಶಿ ಎಸ್.ಪಿ ಇಬ್ರಾಹಿಂ, ಕೆ.ಎಸ್.ಎಸ್.ಪಿ.ಯು ಮಂಜೇಶ್ವರ ಘಟಕದ ಪದಾದಿ üಕಾರಿಗಳಾದ ರವಿಚಂದ್ರ, ಭಾಸ್ಕರ್ ರಾವ್, ಶೀನಪ್ಪ ಪೂಜಾರಿ, ಸಿಪಿಎಂ ಮುಖಂಡ ಕೆ.ಆರ್ ಜಯಾನಂದ ಹಾಗೂ ವಿವಿಧ ರಾಜಕೀಯ ನೇತಾರರು ಭೇಟಿ ನೀಡಿ ಸಂತಾಪ ಸೂಚಿಸಿದ್ದಾರೆ.
