ಮಧೂರು: ಮಧೂರು ಕ್ಷೇತ್ರದ ಕೃಷಿ ವಿಭಾಗದಲ್ಲಿ ನೌಕರನಾಗಿದ್ದ ಕೃಷ್ಣ ಮೂಲ್ಯ (74) ನಿಧನ ಹೊಂದಿದರು. ಮಧೂರು ಅರ್ಜುನಗುಳಿಯ ದಿ| ಕೊರಗ ಮೂಲ್ಯರ ಪುತ್ರನಾಗಿದ್ದಾರೆ. ಮೃತರು ಪತ್ನಿ ಲಕ್ಷ್ಮಿ, ಮಕ್ಕಳಾದ ರಮೇಶ, ಚಂದ್ರಶೇಖರ, ಆಶಾ, ಅಳಿಯ ಸುರೇಶ, ಸೊಸೆಯಂದಿರಾದ ರತ್ನಾವತಿ, ವಿಜಯಲಕ್ಷ್ಮಿ, ಸಹೋದರ ನಾರಾಯಣ, ಸಹೋದರಿಯರಾದ ಸುಶೀಲ, ಜಾನಕಿ ಹಾಗೂ ಅಪಾರ ಬಂಧು-ಮಿತ್ರನ್ನು ಅಗಲಿದ್ದಾರೆ.





