ತಿರುವನಂತಪುರ: ಶಾಲೆಗೆ ತೆರಳುತ್ತಿದ್ದ 9ನೇ ತರಗತಿ ವಿದ್ಯಾರ್ಥಿನಿ ವಿರುದ್ಧ ಲೈಂಗಿಕ ಅತಿಕ್ರಮಣ ನಡೆಸಿರುವುದಾಗಿ ನೀಡಿದ ದೂರಿನಂತೆ ಕೆಎಸ್‌ಆರ್‌ಟಿಸಿ ನಿರ್ವಾಹಕನಿಗೆ ನ್ಯಾಯಾಲಯ ೫ ವರ್ಷದ ಸಜೆ ಹಾಗೂ 25,೦೦೦ ರೂ. ದಂಡ ಶಿಕ್ಷೆ ವಿಧಿಸಿದೆ. ತಿರುವನಂತಪುರ ಪೋಕ್ಸೋ ನ್ಯಾಯಾಲಯದ ನ್ಯಾಯಾಧೀಶ ಎಂ.ಪಿ. ಶಿಬು ಈ ಶಿಕ್ಷೆ ಘೋಷಿಸಿದ್ದಾರೆ. ವೆಂಬಾಯ ವೇಟಿನಾಡ್ ರಾಜ್‌ಭವನ್ ನಿವಾಸಿ ಸತ್ಯರಾಜ್ (53)ನಿಗೆ ನ್ಯಾಯಾಲಯ ಈ ಶಿಕ್ಷೆ ವಿಧಿಸಿದೆ. 2023 ಆಗಸ್ಟ್ 4ರಂದು ಘಟನೆ ನಡೆದಿತ್ತು. ಶಾಲೆಗೆ ತೆರಳಲು ಬಸ್ಸೇರಿದ ೧೪ರ ಹರೆಯದ ಬಾಲಕಿಯನ್ನು ನಿರ್ವಾಹಕ ಹಿಡಿದೆಳೆದನೆಂದು ದೂರಲಾಗಿತ್ತು. ಅಲ್ಲಿಂದ ತಪ್ಪಿಸಿ ದೂರನಿಂತಾಗ ಮತ್ತೆ ಅದೇ ರೀತಿ ವರ್ತಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಶಾಲೆಗೆ ತಲುಪಿದ ಬಳಿಕ ಅಧಿಕಾರಿಗಳಲ್ಲಿ ಬಾಲಕಿ ಈ ವಿಷಯ ತಿಳಿಸಿದ್ದು, ಶಾಲಾ ಅಧಿಕಾರಿಗಳು ಆರ್ಯನಾಡ್ ಪೊಲೀಸರಿಗೆ ಮಾಹಿತಿ ನೀಡಿದ್ದರು.







