ತಿರುವನಂತಪುರ: 143 ಹೊಸ ಬಸ್‌ಗಳನ್ನು ಖರೀದಿಸಲು ತೀರ್ಮಾನಿಸಿರುವ ಬೆನ್ನಲ್ಲೇ ಅದರ ಹೊರತಾಗಿ ಮತ್ತೆ ೧೮೦ ಹೊಸ ಬಸ್‌ಗಳನ್ನು ಖರೀದಿಸಲು ಕೆಎಸ್‌ಆರ್‌ಟಿಸಿ ತೀರ್ಮಾನಿಸಿದೆ. ಇದಕ್ಕಾಗಿ ಟೆಂಡರ್‌ಗಳನ್ನು ಆಹ್ವಾನಿಸುವ ಕ್ರಮಕ್ಕೂ ಚಾಲನೆ ನೀಡಲಾಗಿದೆ. ಹೀಗೆ ಹೊಸದಾಗಿ ಖರೀದಿಸಲು ತೀರ್ಮಾನಿಸಿರುವ ಬಸ್‌ಗಳ ಪೈಕಿ 100 ಸೂಪರ್ ಕ್ಲಾಸ್ ಹಾಗೂ 50 ಆರ್ಡಿನರಿ ಬಸ್‌ಗಳು ಒಳಗೊಂಡಿವೆ.
ಸೂಪರ್‌ಫಾಸ್ಟ್ ಸೇವೆ ನಡೆಸುತ್ತಿರುವ ಬಸ್‌ಗಳ ನಿಗದಿತ ವರ್ಷಗಳ ಸೇವಾ ಅವಧಿ ಕೊನೆಗೊಂಡಿರುವುದೇ ಅದಕ್ಕೆ ಪರ್ಯಾಯವಾಗಿ ಈ ಹೊಸ ಬಸ್‌ಗಳನ್ನು ಖರೀದಿಸಲು ಕೆಎಸ್‌ಆರ್‌ಟಿಸಿ ಈಗ ಮುಂದಾಗಿರುವುದರ ಪ್ರಧಾನ ಕಾರಣವಾಗಿದೆ. ಇದರ ಮೊದಲು 143 ಬಸ್‌ಗಳನ್ನು ಖರೀದಿಸಲು ಕೆಎಸ್‌ಆರ್‌ಟಿಸಿ ತೀರ್ಮಾನಿಸಿತ್ತು. ಆ ಪೈಕಿ 86 ಬಸ್‌ಗಳನ್ನು ಈಗಾಗಲೇ ಖರೀದಿಸಲಾಗಿದೆ. ಇದರಲ್ಲಿ ಕೆಲವು ಬಸ್‌ಗಳು ಈಗ ಬೆಂಗಳೂರಿಗೆ ಸೇವೆ ಆರಂಭಿಸಿವೆ. ಹೊಸ ಬಸ್‌ಗಳ ಖರೀದಿಗಾಗಿ ಸಾರಿಗೆ ಇಲಾಖೆ ೧೮೭ ಕೋಟಿ ರೂ. ಮಂಜೂರು ಮಾಡಿದೆ.