ಉಪ್ಪಳ: ಕೇರಳ ಟೈಲರ್ಸ್ ಅಸೋಸಿ ಯೇಶನ್ ಉಪ್ಪಳ ಯೂನಿಟ್ ಸಮ್ಮೇಳನ ಕೈಕಂಬದಲ್ಲಿರುವ ಪಂಚಮಿ ಹಾಲ್‌ನಲ್ಲಿ ನಡೆಯಿತು. ಯೂನಿಟ್ ಅಧ್ಯಕ್ಷ ದಯಾನಂದ ಎಂ. ಅಧ್ಯಕ್ಷತೆ ವಹಿಸಿದರು. ಸಂಘಟನೆಯ ರಾಜ್ಯ ಸಮಿತಿ ಸದಸ್ಯ ಮೋಹನದಾಸ್ ಕುಂಬಳೆ ಉದ್ಘಾಟಿಸಿ ದರು. ಅತಿಥಿಗಳಾಗಿ ಮಾಜಿ ರಾಜ್ಯ ಸಮಿತಿ ಸದಸ್ಯ ಬಾಲಕೃಷ್ಣ ಕರಿಪ್ಪಾರ್, ಮಂಜೇಶ್ವರ ತಾಲೂಕು ಅಧ್ಯಕ್ಷ ರಾಮ ಪೊಯ್ಯಕಂಡ, ತಾಲೂಕು ಪ್ರಧಾನ ಕಾರ್ಯದರ್ಶಿ ಸತೀಶ ಆಚಾರ್ಯ ಶುಭಾಂಶನೆಗೈದರು. ಈ ಸಂದರ್ಭದಲ್ಲಿ ಹಿರಿಯ ಕಾರ್ಯಕರ್ತರಾದ ಕೇಶವ ಮಯ್ಯ, ಶೋಭ ಪೆರಿಂಗಡಿ, ಮೋಹಿನಿ ಐಲ ಇವರನ್ನು ಸನ್ಮಾನಿಸಲಾಯಿತು. ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲಾಯಿತು. ಯೂನಿಟ್ ಪ್ರಧಾನ ಕಾರ್ಯದರ್ಶಿ ಸುರೇಖ.ಯು ಸ್ವಾಗತಿಸಿ, ವರದಿ ಮಂಡಿಸಿದರು. ಕೋಶಾಧಿಕಾರಿ ಮೋಹನ. ಎಂ. ಲೆಕ್ಕಪತ್ರ ಮಂಡಿಸಿದರು.







