ಕೂಡ್ಲು: ರಜತರಂಗ ಉದ್ಘಾಟನೆ 20ರಂದು

ಕೂಡ್ಲು : ಕುತ್ಯಾಳ ಶ್ರೀ ಗೋಪಾಲಕೃಷ್ಣ ಯಕ್ಷಗಾನ ತರಬೇತಿ ಕೇಂದ್ರ 25 ನೇ ವರ್ಷಕ್ಕೆ ಕಾಲಿರಿಸಿದ್ದು, 25 ನೇ ವಾರ್ಷಿಕೋತ್ಸವವನ್ನು ವೈವಿಧ್ಯಮಯವಾಗಿ ವರ್ಷಪೂರ್ತಿ ಆಚರಿಸಲು ತೀರ್ಮಾನಿಸಲಾಗಿದೆ. ಕಾರ್ಯಕ್ರಮದ ಯಶಸ್ವಿಗಾಗಿ ಎಡನೀರು ಶ್ರೀಗಳು, ಕೊಂಡೆವೂರು ಶ್ರೀಗಳು ಮತ್ತು ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರರು ಗೌರವಾಧ್ಯಕ್ಷರಾಗಿರುವ ರಜತ ಮಹೋತ್ಸವ ಸಮಿತಿ ರಚಿಸಲಾಗಿದೆ. ರಜತರಂಗದ ಉದ್ಘಾಟನಾ ಕಾರ್ಯಕ್ರಮ ಈ ತಿಂಗಳ 20 ರಂದು ಕುತ್ಯಾಳ ಶ್ರೀ ಗೋಪಾಲಕೃಷ್ಣ ದೇವರ ಸನ್ನಿಧಿಯಲ್ಲಿ ಜರಗಲಿದೆ. ಮಧೂರು ಕ್ಷೇತ್ರದ ನಿವೃತ್ತ ಪ್ರಧಾನ ಅರ್ಚಕ ಶ್ರಿ ಕೃಷ್ಣ ಉಪಾಧ್ಯಾಯ ಅಂದು ಬೆಳಗ್ಗೆ 10 ಗಂಟೆಗೆ ಕಾರ್ಯಕ್ರಮ ಉದ್ಘಾಟಿಸುವರು. ಡಾ| ಜನಾರ್ದನ ನಾಯ್ಕ್ ಹಾಗೂ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸದಸ್ಯ ಸಂಕಬೈಲು ಸತೀಶ್ ಅಡಪ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ರಜತ ಮಹೋತ್ಸವ ಸಮಿತಿಯ ಅಧ್ಯಕ್ಷ ಡಾ| ಹರಿಕಿರಣ ಬಂಗೇರ, ಪ್ರಧಾನ ಕಾರ್ಯದರ್ಶಿ ಹರಿನಾರಾಯಣ ಮಯ್ಯ ಹಾಗೂ ತರಬೇತಿ ಕೇಂದ್ರದ ಅಧ್ಯಕ್ಷ ಚಂದ್ರಮೋಹನ ಕೂಡ್ಲು ಉಪಸ್ಥಿತರಿರುವರು. ಶ್ರೀಕ್ಷೇತ್ರ ಕುತ್ಯಾಳದ ಮೊಕ್ತೇಸರ ಕೆ.ಜಿ. ಶಾನ್ ಭಾಗ್ ಅಧ್ಯಕ್ಷತೆ ವಹಿಸುವರು. ಕೂಡ್ಲು ಸುಬ್ರಾಯ ಶಾನ್ ಭಾಗ್ ಮತ್ತು ಹಿರಿಯ ಬಲಿಪ ನಾರಾಯಣ ಭಾಗವತರ ಸಂಸ್ಮರಣೆ ನಡೆಯಲಿದ್ದು, ರಾಜೇಂದ್ರ ಬಜಕೂಡ್ಲು ಮತ್ತು ವೀಜಿ ಕಾಸರಗೋಡು ಸಂಸ್ಮರಣಾ ಭಾಷಣ ಮಾಡುವರು. ಡಾ| ಕೆ.ಕೆ. ಶಾನ್ ಭಾಗ್, ಬಲಿಪ ಶಿವಶಂಕರ ಭಾಗವತರು ಉಪಸ್ಥಿತರಿರುವರು.
ಕೂಡ್ಲು ಸತ್ಯನಾರಾಯಣ ತಂತ್ರಿ ಪ್ರಾಸ್ತಾವಿಸುವರು. ಬಾಯಾರು ಗುರುರಾಜ ಹೊಳ್ಳ, ಸವಿತಾ ಟೀಚರ್ ಭಾಗವಹಿಸುವರು. ಮಧ್ಯಾಹ್ನ 12- ರಿಂದ ತರಬೇತಿ ಕೇಂದ್ರದ ಸದಸ್ಯರು ಮತ್ತು ಅತಿಥಿ ಕಲಾವಿದರಿಂದ ಜ್ವಾಲಾ ಪ್ರತಾಪ ತಾಳಮದ್ದಳೆ ಜರಗಲಿದೆ. ಹಿಮ್ಮೇಳದಲ್ಲಿ ಶಿವಶಂಕರ ಬಲಿಪ, ಚಂದ್ರಶೇಖರ ಭಟ್ ಕೊಂಕಣಾಜೆ, ಲಕ್ಷ್ಮೀಶ ಬೇಂಗ್ರೋಡಿ, ಅರ್ಪಿತ್ ಶೆಟ್ಟಿ ಕೂಡ್ಲು , ಪಾತ್ರವರ್ಗದಲ್ಲಿ ಜಬ್ಬಾರ್ ಸಮೋ ಸಂಪಾಜೆ, ಗೋಪಾಲಕೃಷ್ಣ ನಾಯಕ್ ಸೂರಂಬೈಲು, ಶೇಣಿ ವೇಣುಗೋ ಪಾಲ ಭಟ್, ಹರಿನಾರಾಯಣ ಮಯ್ಯ, ಅಚ್ಯುತ ಬಲ್ಯಾಯ, ಸುರೇಶ್ ಮಣಿಯಾಣಿ ಭಾಗವಹಿಸುವರು. ಅಪರಾಹ್ನ 3 ರಿಂದ ಕೇಂದ್ರದ ಸದಸ್ಯರಿಂದ ನರಕಾಸುರ ಮೋಕ್ಷ ಬಯಲಾಟ ನಡೆಯಲಿದೆ. ಹಿಮ್ಮೇಳದಲ್ಲಿ ತಲ್ಪನಾಜೆ ವೆಂಕಟ್ರಮಣ ಭಟ್, ರಾಮಪ್ರಸಾದ್ ಮಯ್ಯ, ಪೃಥ್ವಿ ಚಂದ್ರ ಪೆರುವೋಡಿ , ರಿತೇಶ್ ಅಡ್ಕ, ಅರ್ಪಿತ್ ಶೆಟ್ಟಿ ಕುತ್ಯಾಳ ಭಾಗವಹಿಸುವರು. ಮುಮ್ಮೇಳದಲ್ಲಿ ತರಬೇತಿ ಕೇಂದ್ರದ ಸದಸ್ಯರು, ವಿದ್ಯಾರ್ಥಿಗಳು ಭಾಗವ ಹಿಸುವರು. ಕೂಡ್ಲು ಮೇಳ, ಸಿರಿಬಾ ಗಿಲು ವೆಂಕಪ್ಪಯ್ಯ ಪ್ರತಿಷ್ಠಾನ ಸಹಕಾರ ನೀಡಲಿದೆ.

RELATED NEWS

You cannot copy contents of this page