ಕುಂಬಳೆ: ಮೊಗ್ರಾಲ್ ಸರಕಾರಿ ಶಾಲೆಯ ಮೈದಾನದಲ್ಲಿ ನಡೆದ ಕುಂಬಳೆ ಪಂ. ಕೇರಳೋತ್ಸವದ ಫುಟ್ಬಾಲ್ ಸ್ಪರ್ಧೆಯಲ್ಲಿ ಮೊಗ್ರಾಲ್ ನೆಕ್ಸ್ಟ್ಜೆನ್ ಜಯಗಳಿಸಿದೆ. ಜಿಎಸ್ಕೆ ಆರಿಕ್ಕಾಡಿ ಕಡವತ್ತ್ ದ್ವಿತೀಯ ಸ್ಥಾನ ಪಡೆದಿದೆ. ಪಂ. ಉಪಾಧ್ಯಕ್ಷ ನಾಸರ್ ಮೊಗ್ರಾಲ್ ಪಂದ್ಯಾಟ ಉದ್ಘಾಟಿಸಿದರು. ವಾರ್ಡ್ ಪ್ರತಿನಿಧಿ ರಿಯಾಸ್ ಮೊಗ್ರಾಲ್ ಅಧ್ಯಕ್ಷತೆ ವಹಿಸಿದರು. ಎಚ್.ಎ. ಖಾಲಿದ್, ಎಂ.ಎಲ್. ಅಬ್ಬಾಸ್, ಇಬ್ರಾಹಿಂ, ಮಖ್ದೂಂ ಸ್ಪರ್ಧೆ ನಿಯಂತ್ರಿಸಿದರು. ಮೊಗ್ರಾಲ್ ಸ್ಪೋರ್ಟ್ಸ್ ಕ್ಲಬ್ ಸದಸ್ಯರು, ವಿವಿಧ ಕ್ಲಬ್ ಪ್ರತಿನಿಧಿಗಳು ಭಾಗವಹಿಸಿದರು.
