ಕುಂಬಳೆ: ಪಂಚಾಯತ್ ಕುಟುಂಬಶ್ರೀ ಮೊಟ್ಟೆ ಉತ್ಸವ ಹಾಗೂ ಕೃಷಿ ವಿಚಾರಗೋಷ್ಠಿ ನಡೆಯಿತು. ಪಂಚಾಯತ್ ಅಧ್ಯಕ್ಷೆ ಯು.ಪಿ. ತಾಹಿರಾ ಉದ್ಘಾಟಿಸಿದರು. ಕುಟುಂಬಶ್ರೀ ಚೆಯರ್‌ಪರ್ಸನ್ ಖದೀಜ ಪಿ.ಕೆ. ಅಧ್ಯಕ್ಷತೆ ವಹಿಸಿದರು. ಮೃಗಾಸ್ಪತ್ರೆಯ ಡಾ. ಅರುಣ್ ರಾಜ್ ತರಗತಿ ನಡೆಸಿದರು. ಪಂ. ಉಪಾಧ್ಯಕ್ಷ ನಾಸರ್ ಮೊಗ್ರಾಲ್, ಸ್ಥಾಯೀ ಸಮಿತಿ ಅಧ್ಯಕ್ಷರಾದ ರಹ್‌ಮಾನ್ ಅರಿಕ್ಕಾಡಿ, ನಸೀಮಾ ಖಾಲಿದ್, ಸದಸ್ಯರು, ಸಿಡಿಎಸ್ ಸದಸ್ಯರು, ವಿನಿಶಾ ಶಾಜಿ, ಆರ್.ಪಿ. ಫಾತಿಮಾ, ಮೆಂಬರ್ ಸೆಕ್ರಟರಿ ಶೈಜು ಮಾತ ನಾಡಿದರು. ಮೊಟ್ಟೆ ಫೆಸ್ಟ್‌ನಂಗವಾಗಿ ಮೊಟ್ಟೆ ಉಪಯೋಗಿಸಿ ತಯಾರಿಸಿದ ವಿವಿಧ ಭಕ್ಷ್ಯ ಪದಾರ್ಥಗಳು, ನಾಡಕೋಳಿ, ಆಡು ಪ್ರದರ್ಶನ, ಮಾರಾಟ ಏರ್ಪಡಿಸಲಾಗಿತ್ತು.






