ಕುಂಬಳೆ: ಪಂಚಾಯತ್‌ನ 24ನೇ ವಾರ್ಡ್ ಶೇಡಿಕಾವುನಿಂದ ಉರಿಯುವ ಪಂಜು ಚಿಹ್ನೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಎನ್. ಕೇಶವ ನಾಯಕ್ ಪಂಚಾಯತ್‌ನಲ್ಲಿ ಬೆಂಕಿಯ ಚೆಂಡುನಂತೆ ಸ್ಪರ್ಧೆ ಒಡ್ಡುತ್ತಿರುವುದಾಗಿ ಅಭಿಪ್ರಾಯಪಡ ಲಾಗಿದೆ. ಮಾಹಿತಿ ಹಕ್ಕು ಕಾರ್ಯಕರ್ತ ನಾಗಿ ಹಾಗೂ ಭ್ರಷ್ಟಾಚಾರ, ಪ್ರಕೃತಿ ಶೋಷಣೆ ವಿರುದ್ಧ ಹೋರಾಟ ನಡೆಸುತ್ತಿರುವ ಇವರು ಪಂಚಾಯ ತ್‌ನಲ್ಲಿ ಹೆಚ್ಚಿನವರಿಗೆ ಪರಿಚಿತರಾದ ವ್ಯಕ್ತಿಯಾಗಿ ದ್ದಾರೆ. ಪಂಚಾಯತ್‌ನಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ ಎಂದು ಆರೋಪಿಸಿ ಇವರು ಸ್ವತಂತ್ರ ಅಭ್ಯರ್ಥಿಯಾಗಿ ನಿಂತು ಪಂಚಾ ಯತ್‌ನ್ನು ಸ್ವಚ್ಛಗೊಳಿಸಲು ತೀರ್ಮಾ ನಿಸಿದ್ದೇನೆ ಎಂದು ತಿಳಿಸಿದ್ದಾರೆ. ತನ್ನ ಅಭ್ಯರ್ಥಿತನ ಕೆಲವರ ಎದೆ ನಡುಕಕ್ಕೆ ಕಾರಣವಾಗಿರುವುದಾಗಿಯೂ ಅವರು ತಿಳಿಸಿದ್ದು, ಕಾಸರಗೋಡು ಬ್ಲೋಕ್ ಮೊಗ್ರಾಲ್ ಡಿವಿಶನ್-೨ ನಿಂದಲೂ, ಜಿಲ್ಲಾ ಪಂಚಾಯತ್‌ಗೆ ಕುಂಬಳೆ ಡಿವಿಶನ್‌ನಿಂದಲೂ ಗುಲಾಬಿ ಹೂ ಚಿಹ್ನೆಯಲ್ಲಿ ಸ್ಪರ್ಧಿಸುತ್ತಿದ್ದಾರೆ.
ಮತದಾ ರರನ್ನು ಮುಖತಃ ಭೇಟಿಯಾಗುವ ಕಾರ್ಯದಲ್ಲಿ ನಿರತನಾಗಿರುವ ಎನ್. ಕೇಶವ ನಾಯಕ್ ಪಂಚಾಯತ್ ಸದಸ್ಯನಾಗಿ ಗೆಲ್ಲುವ ನಿರೀಕ್ಷೆಯನ್ನು ಹೊಂದಿದ್ದು, ಮತದಾರರು ಕೂಡಾ ಇವರ ಬಗ್ಗೆ ಒಲವು ತಾಳಿದ್ದಾರೆಂದು ಇವರು ತಿಳಿಸುತ್ತಾರೆ.







