ಮುಳ್ಳೇರಿಯ: ಕುಂಬಳೆ ಉಪಜಿಲ್ಲಾ ಶಾಲಾ ಕಲೋತ್ಸವದ ಸ್ವಾಗತ ಸಮಿತಿ ಕಚೇರಿಯ ಉದ್ಘಾಟನೆ ಇಂದು ಅಪರಾಹ್ನ ೩ ಗಂಟೆಗೆ ಮುಳ್ಳೇ ರಿಯ ಜಿವಿಎಚ್ ಎಸ್‌ಎಸ್‌ನ ಹೈಸ್ಕೂಲ್ ವಿಭಾಗದಲ್ಲಿ ನಡೆಯಲಿದೆ. ಜಿಲ್ಲಾ ಪಂಚಾಯತ್ ವಿದ್ಯಾಭ್ಯಾಸ ಸ್ಥಾಯೀ ಸಮಿತಿ ಅಧ್ಯಕ್ಷೆ ಸರಿತಾ ಉದ್ಘಾಟಿಸುವರು. ಉದ್ಯಮಿ ಎ.ಜಿ. ಗಣೇಶ್ ಶೆಟ್ಟಿ ಮಲ್ಲಾವರ ಅತಿಥಿಯಾಗಿ ರುವರು. ಕಲೋತ್ಸವದಂ ಗವಾಗಿ ಆಯ್ಕೆಯಾದ ಲಾಂಛನವನ್ನು ಸ್ವಾಗತ ಸಮಿತಿ ಗೌರವಾಧ್ಯಕ್ಷ ನ್ಯಾಯವಾದಿ ಗೋಪಾಲಕೃಷ್ಣ ಬಿಡುಗಡೆಗೊಳಿ ಸುವರು. ನವಂಬರ್ 11ರಿಂದ 15ರ ವರೆಗೆ ಮುಳ್ಳೇರಿಯ ಜಿವಿಎಚ್‌ಎಸ್ ಎಸ್‌ನಲ್ಲಿ ಕುಂಬಳೆ ಉಪಜಿಲ್ಲಾ ಶಾಲಾ ಕಲೋತ್ಸವ ನಡೆಯಲಿದೆ.

 
								 
															





