ಕುಂಬಳೆ ಪಂ. ಮಾಜಿ ಅಧ್ಯಕ್ಷ ಬಶೀರ್ ಮುಹಮ್ಮದ್ ಕುಂಞಿ ನಿಧನ

ಕುಂಬಳೆ: ಕುಂಬಳೆ ಪಂಚಾಯತ್ ಮಾಜಿ ಅಧ್ಯಕ್ಷರ, ಹಿರಿಯ ಲೀಗ್ ನೇತಾರನಾದ ಮೊಗ್ರಾಲ್‌ನ ಬಶೀರ್ ಮುಹಮ್ಮದ್ ಕುಂಞಿ (89) ನಿಧನಹೊಂದಿದರು.  ವೃದ್ಧಾಪ್ಯ ಸಹಜ ಅಸೌಖ್ಯದ ಹಿನ್ನೆಲೆಯಲ್ಲಿ ವಿಶ್ರಾಂತಿಯಲ್ಲಿದ್ದರು. ಮಂಜೇಶ್ವರ ಮಂಡಲದ ಹಿರಿಯ ಲೀಗ್ ನೇತಾರನಾಗಿದ್ದ ಇವರು ಜಿಲ್ಲಾ ಉಪಾಧ್ಯಕ್ಷರಾಗಿಯೂ ಕಾರ್ಯಾಚರಿಸಿದ್ದಾರೆ.  ವಿದ್ಯಾರ್ಥಿಯಾಗಿದ್ದಾಗಲೇ ಎಂ.ಎಸ್.ಎಫ್ ಮೂಲಕ ರಾಜಕೀಯ ರಂಗದಲ್ಲಿ ತೊಡಗಿಕೊಂ ಡಿದ್ದರು.ಮಂಜೇಶ್ವರ ಮಂಡಲದಲ್ಲಿ ಪಕ್ಷವನ್ನು ಕಟ್ಟಿ ಬೆಳೆಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದಾರೆ.  ಕುಂಬಳೆ ಬದರ್ ಜುಮಾ ಮಸೀದಿಯ ಉಪಾಧ್ಯಕ್ಷರಾಗಿಯೂ ಕಾರ್ಯಾಚರಿಸಿದ್ದಾರೆ. ಹಿರಿಯ ವ್ಯಾಪಾರಿಯೂ, ಫುಟ್ಬಾಲ್, ಶೆಟಲ್‌ನ ರೆಫರಿಯೂ ಆಗಿದ್ದರು.

ಮೃತರು ಪತ್ನಿ ಹಪ್ಸ, ಮಕ್ಕಳಾದ ಡಾ| ಇಸ್ಮಾಯಿಲ್, ಫೌಸಿಯ, ಅಳಿಯ ಬಶೀರ್ ಮೊಗ್ರಾಲ್, ಸೊಸೆ ಲಮ್ಯ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page