ಉಪ್ಪಳ: ಕುಂಬಳೆಯಲ್ಲಿ ಟೋಲ್ ಪ್ಲಾಜಾ ಕಾರ್ಯಾಚರಿಸಲು, ನೇಶನಲ್ ಹೈವೇ ಟೋಲ್ ಸಂಗ್ರಹಿಸಲು ಪ್ರಸ್ತುತ ನೇಶನಲ್ ಹೈವೇ ಪ್ರಾಧಿಕಾರಕ್ಕೆ ಕೇಂದ್ರ ಸರಕಾರದ ಒಪ್ಪಿಗೆ ಇಲ್ಲ ಎಂಬ ಹೈಕೋರ್ಟ್‌ನ ಮಧ್ಯಪ್ರವೇಶ ನಿರೀಕ್ಷೆ ನೀಡುತ್ತಿದೆ ಎಂದು ಕ್ರಿಯಾ ಸಮಿತಿ ಅಧ್ಯಕ್ಷ ಶಾಸಕ ಎಕೆಎಂ ಅಶ್ರಫ್ ನುಡಿದರು. ಕ್ರಿಯಾ ಸಮಿತಿಯ ನೇತೃತ್ವದಲ್ಲಿ ಮುಂದುವರಿಯುತ್ತಿರುವ ಜನಪರ ಮುಷ್ಕರ ಹೈಕೋರ್ಟ್ ಹಾಗೂ ಕೇಂದ್ರ ಸರಕಾರದ ಅನುಕೂಲ ನಿಲುವಿಗೆ ಕಾರಣವಾಗಬಹುದೆಂದು ನಿರೀಕ್ಷಿಸುತ್ತಿರುವುದಾಗಿಯೂ ಅವರು ನುಡಿದರು. ಕೇಂದ್ರ ಸರಕಾರದ ಅನುಮತಿ ರಹಿತವಾಗಿ ಟೋಲ್ ಪ್ಲಾಜಾ ಕಾರ್ಯಾರಂಭಗೊಳಿಸಲು, ಟೋಲ್ ಸಂಗ್ರಹಿಸಲು ಪ್ರಾಧಿಕಾರಕ್ಕೆ ಸಾಧ್ಯವಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯ ಪಟ್ಟಿದೆ.
ಕೇಂದ್ರ ಸರಕಾರದ ಅನುಮತಿ ಲಭಿಸಿದ ಬಳಿಕವೇ ಟೋಲ್ ಚಟುವಟಿಕೆ ಆರಂಭಿಸಿ ಹಣ ಸಂಗ್ರಹಿಸುವುದಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹೈಕೋರ್ಟ್‌ನಲ್ಲಿ ಒಪ್ಪಿದ ಹಿನ್ನೆಲೆಯಲ್ಲಿ ಕುಂಬಳೆ ಟೋಲ್ ಪ್ಲಾಜಾದ ಅಂತಿಮ ಮಾತು ಬಿಜೆಪಿ ನೇತೃತ್ವ ನೀಡುವ ಕೇಂದ್ರ ಸರಕಾರ ಹೇಳಬೇಕಾಗಿದೆ ಎಂದು ಇದರಿಂದ ತಿಳಿದು ಬರುತ್ತದೆ. ಈ ವಿಷಯದಲ್ಲಿ ಸಾರ್ವಜನಿಕರ ಆಸಕ್ತಿಯನ್ನು ಮುಂದಿ ಟ್ಟುಕೊಂಡು ಬಿಜೆಪಿ ಸರಕಾರ ಕುಂಬಳೆ ಟೋಲ್ ಪ್ಲಾಜಾವನ್ನು ಹೊರತುಪಡಿ ಸುವುದಾಗಿ ನಿರೀಕ್ಷಿಸುತ್ತಿದ್ದೇನೆ ಎಂದು ಶಾಸಕರು ನುಡಿದರು. ಈ ಪ್ರಕರಣದಲ್ಲಿ ಈ ತಿಂಗಳ ೨೮ರಂದು ಮತ್ತೆ ವಿಚಾರಣೆ ನಡೆಯಲಿದೆ. ಈ ಸಮಯದಲ್ಲಿ ಕೇಂದ್ರ ಸರಕಾರ ಹಾಗೂ ಕಾಸರಗೋಡಿನ ಬಿಜೆಪಿ ಮುಖಂಡರು ಟೋಲ್ ಪ್ಲಾಜಾವನ್ನು ಎದುರಿಸುವ ನಿಲುವು ಹೊಂದುವರೆಂದು ನಿರೀಕ್ಷಿಸುತ್ತಿರುವು ದಾಗಿಯೂ ಅವರು ತಿಳಿಸಿದರು.