ಕುಂಬಳೆ ಟೋಲ್ ಪ್ರತಿಭಟನೆ: ಪ್ರೆಸ್ ಫಾರಂನಿಂದ ಬೆಂಬಲ, ಮನವಿ ಸಲ್ಲಿಕೆ

ಕುಂಬಳೆ: ಆರಿಕ್ಕಾಡಿ ಟೋಲ್ ಪ್ಲಾಜಾವನ್ನು ತಕ್ಷಣ ನಿಲುಗಡೆಗೊಳಿ ಬೇಕೆಂದು ಆಗ್ರಹಿಸಿ ಕಳೆದ ಕೆಲವು ದಿನ ಗಳಿಂದ ನಡೆಯುತ್ತಿರುವ ಪ್ರತಿಭಟನೆ ಹಿನ್ನೆಲೆಯಲ್ಲಿ  ಕುಂಬಳೆ ಪ್ರೆಸ್ ಫಾರಂ ನೇತೃತ್ವದಲ್ಲಿ ಸ್ಥಳಕ್ಕೆ ತೆರಳಿ ಶಾಸಕರಿಗೆ ಬೆಂಬಲ ಸೂಚಿಸಲಾಯಿತು. ಇದೇ ವೇಳೆ ಚಳವಳಿಯಲ್ಲಿ  ಹೆಚ್ಚಿನ ಸಂಖ್ಯೆ ಯಲ್ಲಿ ಭಾಗವಹಿಸಲು ಪತ್ರಕರ್ತರು ಸಂಪೂರ್ಣ ಬೆಂಬಲ ನೀಡುವ ಭರವಸೆ ನೀಡಿದರು. ಪ್ರೆಸ್ ಫಾರಂ ಅಧ್ಯಕ್ಷ ಕೆ.ಎ.ಎಂ.ಸತ್ತಾರ್, ಕಾರ್ಯದರ್ಶಿ ಅಬ್ದುಲ್ಲ ಕುಂಬಳೆ, ಕೋಶಾಧಿಕಾರಿ ಅಬ್ದುಲ್ ಲತೀಫ್ ಕುಂಬಳೆ, ಸದಸ್ಯ ರಾದ ಅಶ್ರಫ್, ರಫೀಕ್, ಧನರಾಜ್ ಭಾಗವಹಿಸಿದರು. ಪ್ರೆಸ್ ಫಾರಂ ನೇತೃತ್ವದಲ್ಲಿ ತಯಾರಿಸಿದ ಮನವಿ ಪತ್ರವನ್ನು  ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ಶಾಸಕ ಎಕೆಎಂ ಅಶ್ರಫ್,ಜಿಲ್ಲಾಧಿಕಾರಿ  ಹಾಗೂ ಹೆದ್ದಾರಿ ವಿಭಾಗದ ಅಧಿಕಾರಿಗಳಿಗೆ ಕಳುಹಿಸಿಕೊಡಲಾಯಿತು.

RELATED NEWS

You cannot copy contents of this page