ಕುಂಬಳೆ: ಕುಂಬಳೆ ಪೇಟೆಯ ಟ್ರಾಫಿಕ್ ಪರಿಷ್ಕರಣೆಗೆ ಸಂಬಂಧಿಸಿ ಜ್ಯಾರಿಗೊಳಿಸಿದ ವ್ಯವಸ್ಥೆಗಳು ಅವೈಜ್ಞಾನಿಕವಾಗಿದೆಯೆಂದು ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಕುಂಬಳೆ ಘಟಕ ಅಧ್ಯಕ್ಷ ರಾಜೇಶ್ ಮನಯತ್ ಆರೋಪಿಸಿದ್ದಾರೆ. ಪ್ರಾಯೋಗಾರ್ಥವಾಗಿ ಜ್ಯಾರಿಗೊಳಿಸಿದ ಪರಿಷ್ಕಾರ ಬಸ್ ಪ್ರಯಾಣಿಕರಿಗೆ ಭಾರೀ ಸಮಸ್ಯೆ ಸೃಷ್ಟಿಸುತ್ತಿದೆ. ಕುಂಬಳೆಯ ಮಿನಿ ಸಿವಿಲ್ ಸ್ಟೇಷನ್ ಎಂದೇ ತಿಳಿಯಲ್ಪಡುವ ಪೊಲೀಸ್ ಠಾಣೆ ರಸ್ತೆಗೆ ತಲುಪಲು ದೀರ್ಘದೂರ ನಡೆದು ಹೋಗಬೇಕಾದ ಸ್ಥಿತಿ ಉಂಟಾಗಿದೆ. ಶ್ರೀ ಕಣಿಪುರ ಗೋಪಾಲಕೃಷ್ಣ ಕ್ಷೇತ್ರ, ಪಂಚಾಯತ್ ಕಚೇರಿ, ಪೊಲೀಸ್ ಠಾಣೆ, ವಿವಿಧ ಕಚೇರಿಗಳು, ಮೀನು, ಮಾಂಸ ಮಾರುಕಟ್ಟೆಗಳು ಇಲ್ಲಿ ಕಾರ್ಯಾಚರಿಸುತ್ತಿವೆ. ಜನರು ಇದೀಗ ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಗಣಿಸಿ ತುರ್ತು ಟ್ರಾಫಿಕ್ ಕಮಿಟಿಯನ್ನು ಕರೆದು ಪರಿಹಾರ ಕಾಣಬೇಕೆಂದು ರಾಜೇಶ್ ಮನಯತ್ ಒತ್ತಾಯಿಸಿದ್ದಾರೆ. ಆಟೋಗಳ ರಿಜಿಸ್ಟ್ರೇಷನ್ ಕ್ರಮಗಳನ್ನು ಶೀಘ್ರ ಪೂರ್ತಿಗೊಳಿಸಬೇಕೆಂದೂ ಅವರು ಆಗ್ರಹಪಟ್ಟಿದ್ದಾರೆ.
