ಕಾಸರಗೋಡು: ಹಲವು ಮಂದಿ ಯಿಂದ ಕೋಟ್ಯಂತರ ರೂಪಾಯಿ ಠೇವಣಿಯಾಗಿ ಸಂಗ್ರಹಿಸಿದ ಬಳಿಕ ಅದನ್ನು ಮರಳಿ ನೀಡದೆ ವಂಚಿಸಿದ ಕುಂಡಂಗುಳಿಯ ಜಿಬಿಜಿ (ಗ್ಲೋಬಲ್ ಬ್ಯುಸಿನೆಸ್ ಗ್ರೂಪ್) ವಿರುದ್ಧ ಬೇಡಗಂ ಪೊಲೀಸರು ಇನ್ನೊಂದು ಕೇಸು ದಾಖಲಿಸಿಕೊಂಡಿದ್ದಾರೆ. ಪೆರಿಯ ಪುಳಿಕ್ಕಾಲ್‌ನ ರತಿ (38) ನೀಡಿದ ದೂರಿನಂತೆ ಜಿಬಿಜಿ ಕಂಪೆನಿಯನ್ನು ಒಂದು ಹಾಗೂ ಮೆನೇಜಿಂಗ್ ಡೈರೆಕ್ಟರ್ ಕುಂಡಂಗುಳಿ ಚಿನ್ನು ಲಾಲ್ ಹಾಸ್‌ನ ಡಿ. ವಿನೋದ್ ಕುಮಾರ್ ನನ್ನು ಎರಡನೇ ಆರೋಪಿಯಾಗಿ ಕೇಸು ದಾಖಲಿಸಲಾಗಿದೆ. 2022 ಸೆಪ್ಟಂಬರ್ 22ರಂದು ಭಾರೀ ಲಾಭದ ಭರವಸೆಯೊಡ್ಡಿ 50 ಸಾವಿರ ರೂಪಾಯಿ ಠೇವಣಿಯಾಗಿ ಪಡೆದು ಕೊಂಡಿದ್ದು, ಬಳಿಕ ಮೂರು ಬಾರಿ ಯಾಗಿ 6750 ರೂಪಾಯಿಗಳನ್ನು ಮಾತ್ರ ಮರಳಿ ನೀಡಿರುವುದಾಗಿ ರತಿ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಹೊಸ ಪ್ರಕರಣ ದಾಖಲಿಸುವುದರೊಂದಿಗೆ ಜಿಬಿಜಿ ಠೇವಣಿ ವಂಚನೆಗೆ ಸಂಬಂಧಿಸಿ ಬೇಡಗಂ ಪೊಲೀಸರು ದಾಖಲಿಸಿಕೊಂಡ ಪ್ರಕರಣಗಳ ಸಂಖ್ಯೆ 31ಕ್ಕೇರಿದೆ. ಠೇವಣಿ ವಂಚನೆ ಪ್ರಕರಣದಲ್ಲಿ ಸೆರೆಗೀಡಾದ ಮುಖ್ಯ ಆರೋಪಿ ಡಿ. ವಿನೋದ್ ಕುಮಾರ್ ಜಾಮೀನಿನಲ್ಲಿ ಬಿಡುಗಡೆಗೊಂಡಿ ದ್ದಾನೆ. ಬಳಿಕ ಈತ ಎಲ್ಲಿಗೆ ಹೋಗಿದ್ದಾನೆಂದು ತಿಳಿದುಬಂದಿಲ್ಲ. ಪೊಲೀಸರು ನಡೆಸಿದ ತನಿಖೆಯಲ್ಲಿ ವಿನೋದ್ ಕುಮಾರ್ ತಮಿಳುನಾಡಿನ ಲ್ಲಿರುವುದಾಗಿ ಸೂಚನೆ ಲಭಿಸಿದೆ.







