ಕುರುಡಪದವು ರಸ್ತೆ ಅಭಿವೃದ್ಧಿಗೆ ಚಾಲನೆ: ಕಾಮಗಾರಿ ಆರಂಭ

ಪೈವಳಿಕೆ: ಶೋಚನೀಯÁವಸ್ಥೆ ಯಲ್ಲಿರುವ, ಊರವರ ಪ್ರತಿಭಟನೆಗೆ ಕಾರಣವಾಗಿದ್ದ ಲಾಲ್‌ಭಾಗ್- ಕುರುಡಪದವು ರಸ್ತೆ ಅಭಿವೃದ್ದಿಗೆ ಕೊನೆಗೂ ಅಧಿಕಾರಿ ವರ್ಗ ಮುಂ ದಾಗಿದೆ. ಪ್ರಥಮ ಹಂತದಲ್ಲಿ ಲಾಲ್ ಭಾಗ್‌ನಿಂದ ಚಿಪ್ಪಾರು ಅಮ್ಮೇರಿ ತನಕ ಸುಮಾರು ಮೂರುವರೆ ಕಿಲೋ ಮೀಟರ್ ರಸ್ತೆಯನ್ನು ಅಭಿವೃದ್ದಿಗೊಳಿಸಲು ತೀರ್ಮಾನಿಸ ಲಾಗಿದೆ.
ರಸ್ತೆ ಅಗಲೀಕರಣಗೊಳಿ ಸುವ ಕಾಮಗಾರಿ ಕಳೆದ ಒಂದು ತಿಂಗಳಿAದ ನಡೆಯುತ್ತಿದೆ. ಆದರೆ ಮಳೆಯಿಂದಾಗಿ ಕಾಮಗಾರಿಗೆ ಅಡಚಣೆ ಉಂಟಾಗುತ್ತಿದ್ದು, ರಸ್ತೆ ಕೆಸರುಗದ್ದೆಯಂತಾಗಿ ಸಂಚಾರಕ್ಕೆ ಸಮಸ್ಯೆ ಉಂಟಾಗಿದೆ. ಕುಂಬಳೆ ನಿವಾಸಿಯೋರ್ವರು ಗುತ್ತಿಗೆ ಪಡೆದುಕೊಂಡಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ಈ ರಸ್ತೆ ಹದಗೆಟ್ಟು ಮಳೆಗಾಲ, ಬೇಸಿಗೆಗಾಲ ದಲ್ಲೂ ಬಸ್ ಸಹಿತ ವಾಹನ ಸಂಚಾರ ನರಕಯಾತನೆಯಾಗಿದೆ. ಈಗ ಅಭಿವೃದ್ದಿಗೆ ಮುಂದಾಗಿ ರುವುದು ಊರವರಲ್ಲಿ ನೆಮ್ಮದಿಯನ್ನುಂಟುಮಾಡಿದೆ.

RELATED NEWS

You cannot copy contents of this page