ಕಾಸರಗೋಡು: ಕೊಲ್ಲಂನಲ್ಲಿ ಸಂಭವಿಸಿದ್ದ ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದ ಕುತ್ತಿಕೋಲ್ ಪಂಚಾಯತ್ನ ಕ್ಲ್ಲರ್ಕ್ ಮೃತಪಟ್ಟರು. ಕೊಲ್ಲಂ ನಿವಾಸಿ ಅಲಕ್ಸ್ ಜೋನ್ಸನ್ (28) ಮೃತಪಟ್ಟವರು. ಕಳೆದ ತಿಂಗಳ ೨೧ರಂದು ಅಪಘಾತ ಸಂಭವಿಸಿತ್ತು. ಬೆಕ್ಕು ರಸ್ತೆಗೆ ಅಡ್ಡಬಂದ ಹಿನ್ನೆಲೆಯಲ್ಲಿ ತಪ್ಪಿಸಲೆತ್ನಿಸುವಾಗ ಬೈಕ್ ನಿಯಂತ್ರಣ ತಪ್ಪಿ ಮಗುಚಿತ್ತು. ಗಾಯಗೊಂಡ ಅಲಕ್ಸ್ರನ್ನು ಸ್ಥಳೀಯ ಆಸ್ಪತ್ರೆಯಲ್ಲಿ ವೆಂಟಿಲೇಟರ್ನಲ್ಲಿರಿಸಲಾಗಿತ್ತು. ನಿನ್ನೆ ಬೆಳಿಗ್ಗೆ ನಿಧನ ಸಂಭವಿಸಿದೆ. ಕಳೆದ ಒಂದೂವರೆ ವರ್ಷದಿಂದ ಕುತ್ತಿಕೋಲ್ ಪಂಚಾಯತ್ನಲ್ಲಿ ಕರ್ತವ್ಯದಲ್ಲಿದ್ದರು. ಈ ಮೊದಲು ಚೆಂಗಳ ಪಂಚಾಯತ್ನಲ್ಲಿಯೂ ಕ್ಲರ್ಕ್ ಆಗಿ ಕರ್ತವ್ಯ ನಿರ್ವಹಿಸಿದ್ದರು.







