ಪೆರ್ಲ: ಎಣ್ಮಕಜೆ ಪಂಚಾಯತ್ ಕುಟುಂಬಶ್ರೀ ಸಿಡಿಎಸ್ ಸದಸ್ಯೆ, ಹಸಿರು ಕ್ರಿಯಾಸೇನೆ ಕಾರ್ಯಕರ್ತೆ ಮುಂಡಿತ್ತಡ್ಕ ನೂಜಿಲ ನಿವಾಸಿ ಸಿಸಿಲಿಯಾ ಡಿಸೋಜಾ (58) ನಿಧನ ಹೊಂದಿದರು. ಮನೆಯಲ್ಲಿ ಎದೆನೋವು ಕಂಡು ಬಂದ ಹಿನ್ನೆಲೆಯಲ್ಲಿ ಕುಂಬಳೆಯ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಯಿ ತಾದರೂ ಪ್ರಾಣ ರಕ್ಷಿಸಲು ಸಾಧ್ಯ ವಾಗಲಿಲ್ಲ. ಕಳೆದ ಪಂ. ಚುನಾವಣೆಯಲ್ಲಿ ಸಿಪಿಎಂನಿಂದ ಸ್ಪರ್ಧಿಸಿದ್ದರು. ಬಳಿಕ ಕಾಂಗ್ರೆಸ್‌ಗೆ ಪಕ್ಷಾಂತರಗೊಂಡು ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯರಾಗಿದ್ದರು.
ಮೃತರು ಪತಿ ಫಿಲಿಪ್ಸ್ ಡಿಸೋಜಾ, ಮಕ್ಕಳಾದ ಲವಿಟಾ (ದುಬೈ), ಅಕ್ಷತ್ ಮೆಲ್ವಿನ್, ಅಕ್ಷತ್ ಸಂದೀಪ್, ಅಳಿಯ ಕಿರಣ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ನಿಧನಕ್ಕೆ ಎಣ್ಮಕಜೆ ಪಂ. ಅಧ್ಯಕ್ಷ ಸೋಮಶೇಖರ ಜೆ.ಎಸ್, ಆಡಳಿತ ಸಮಿತಿ, ಕುಟುಂಬಶ್ರೀ ಅಧ್ಯಕ್ಷೆ ಜಲಜಾಕ್ಷಿ, ಹಸಿರು ಕ್ರಿಯಾಸೇನೆ ಕಾರ್ಯಕರ್ತರು ಸಂತಾಪ ಸೂಚಿಸಿದ್ದಾರೆ.