ಬದಿಯಡ್ಕ: ಪಂಚಾಯತ್ ಕುಟುಂಬಶ್ರೀ ಸಿಡಿಎಸ್ ವತಿಯಿಂದ ಜನಪ್ರತಿನಿಧಿಗಳನ್ನು ಅಭಿನಂದಿಸಲಾ ಯಿತು. ಸಿಡಿಎಸ್ ಸಭಾಭವನದಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಹಿರಿಯ ಸದಸ್ಯ ಬಾಲಕೃಷ್ಣ ಶೆಟ್ಟಿ ಅಧ್ಯಕ್ಷತೆ ವಹಿಸಿದರು. ಸ್ನೇಹವೀಡ್ ಯೋಜನೆ ಯನ್ನು ಪಂಚಾಯತ್ ಉಪಾಧ್ಯಕ್ಷೆ ಅಶ್ವಿನಿ ಕೆ.ಎಂ. ಉದ್ಘಾಟಿಸಿ ಮಾತನಾಡಿ ದರು. ಕುಟುಂಬಶ್ರೀ ಜಿಲ್ಲಾಧಿಕಾರಿ ಯಧುರಾಜ್ ಸ್ನೇಹವೀಡ್ ಯೋಜನೆಯ ಮಾಹಿತಿ ನೀಡಿದರು. ಕುಟುಂಬಶ್ರೀ ನೇತೃತ್ವದಲ್ಲಿ ನಡೆಯುವ ಈ ಯೋಜನೆಗೆ ಉಪಾಧ್ಯಕ್ಷೆ ಧನಸಹಾಯ ಹಸ್ತಾಂತರಿಸಿದರು. ಸಿಡಿಎಸ್ ಚೆಯರ್ ಪರ್ಸನ್ ಅನಿತಾ ಕ್ರಾಸ್ತಾ ಸ್ವಾಗತಿಸಿ, ಚೆಯರ್ ಪರ್ಸನ್ ಅನಿತಾ ಕ್ರಾಸ್ತಾ ವಂದಿಸಿದರು.







