ಕಾಸರಗೋಡು: ವಿಧಾನಸಭಾ ಚುನಾವಣೆಯ ಬ್ಯುಸಿಯ ಮಧ್ಯೆ ಪೋಲಿಂಗ್ ಅಧಿಕಾರಿಗಳಿಗೆ ಹಾಗೂ ಭದ್ರತಾ ಅಧಿಕಾರಿಗಳಿಗೆ ಕುಟುಂಬಶ್ರೀ ವಿತರಿಸಿದ ಆಹಾರ ಮೂಲಕ 20,69,412 ರೂ.ಗಳ ಆದಾಯ ಗಳಿಸಿದೆ. ಸೂಕ್ತವಾದ ಆಯೋಜನೆಯ ಮೂಲಕ ನಡೆಸಿದ ಈ ಕಾರ್ಯ ಜಿಲ್ಲೆಯ ಮಹಿಳಾ ಒಕ್ಕೂಟದ ಶಕ್ತಿಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಚುನಾವಣೆ ದಿನಾಂಕ ಘೋಷಿಸಿದ ಬೆನ್ನಲ್ಲೇ ವಿಪುಲವಾದ ಸಿದ್ಧತೆಗಳನ್ನು ಜಿಲ್ಲಾ ಮಿಷನ್ ನೇತೃತ್ವದಲ್ಲಿ ಆರಂಭಿಸಲಾಗಿತ್ತು. ಜಿಲ್ಲೆಯಾದ್ಯಂತವಿರುವ 324 ಕಫೆ ಘಟಕಗಳನ್ನು ಆಹಾರ ವಿತರಣೆಗಾಗಿ ಸಿದ್ಧಗೊಳಿಸಲಾಗಿತ್ತು. ಅಧಿಕಾರಿಗಳಿಗೆ ಅಗತ್ಯವಾದ ಉಪಹಾರ, ಮಧ್ಯಾಹ್ನ ದೂಟ, ಚಹಾ ಎಂಬಿವು ಯಾವುದೇ ಮೊಟಕಿಲ್ಲದೆ ಕೂಕ್ತ ಸಮಯದಲ್ಲಿಯೇ ಎಲ್ಲಾ ಮತಗಟ್ಟೆಗಳಿಗೂ ತಲುಪಿಸಲು ಪ್ರತ್ಯೇಕ ವ್ಯವಸ್ಥೆಯನ್ನು ಏರ್ಪಡಿಸಲಾ ಗಿತ್ತು. ಚುನಾವಣೆ ಆಯೋಗದ ನಿರ್ದೇಶ ಪ್ರಕಾರ ಪೂರ್ಣವಾಗಿ ಹಸಿರು ಕಾಯ್ದೆ ಯನ್ನು ಪಾಲಿಸಿಕೊಂಡು ಕುಟುಂಬಶ್ರೀ ಕಾರ್ಯಾಚರಿಸಿದೆ. ಪ್ಲಾಸ್ಟಿಕ್ ಕವರ್‌ಗಳು, ಡಿಸ್ಪೋಸಿಬಲ್ ಪಾತ್ರೆಗಳನ್ನು ಉಪಯೋಗಿಸದೆ ಪರಿಸರ ಸೌಹಾರ್ದ ವಾದ ರೀತಿಯಲ್ಲಿ ಆಹಾರ ಪ್ಯಾಕ್ ಮಾಡಿರುವುದು ಗಮನೀಯ ವಾಗಿದೆ. ಭಾರೀ ಮಟ್ಟದಲ್ಲಿರುವ ತ್ಯಾಜ್ಯವನ್ನು ಹೊರತುಪಡಿಸಲು ಸಾಧ್ಯವಾಗಿರುವುದು ಈ ಬಾರಿಯ ಚುನಾವಣೆಯ ಚಟುವಟಿಕೆಗಳ ಮೈಲುಗಲ್ಲಾಗಿದೆ.






