ಬಿದ್ದು ಸಿಕ್ಕಿದ ಚಿನ್ನಾಭರಣವನ್ನು ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಲ್ಯಾಬ್ ಟೆಕ್ನೀಷನ್

ಮೊಗ್ರಾಲ್: ಉಪ್ಪಳದಿಂದ ಮೊಗ್ರಾಲ್ ಪುತ್ತೂರಿಗಿರುವ ಬಸ್ ಪ್ರಯಾಣದ ಮಧ್ಯೆ ಕಳೆದುಹೋಗಿದ್ದ  ಅರ್ಧ ಪವನ್ ತೂಕದ ಚಿನ್ನಾಭರಣ ವನ್ನು ಮಾಲಕನಿಗೆ ಹಿಂತಿರುಗಿಸಿ ಮೊಗ್ರಾಲ್ ಸರಕಾರಿ ಯುನಾನಿ ಆಸ್ಪ ತ್ರೆಯ ಲ್ಯಾಬ್ ಟೆಕ್ನೀಷನ್ ಫಾತಿಮತ್ ಮುಮ್ತಾಸ್ ಪ್ರಾಮಾಣಿಕತೆ ಮೆರೆದಿದ್ದಾರೆ. ಮೊಗ್ರಾಲ್‌ನಿಂದ ಕಾಸರಗೋಡಿಗೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಮುಮ್ತಾಸ್‌ಗೆ ಬಸ್‌ನ ಸೀಟಿನಿಂದ ಚಿನ್ನದ ಬ್ರೇಸ್‌ಲೆಟ್ ಬಿದ್ದು ಸಿಕ್ಕಿತ್ತು. ಮೊಗ್ರಾಲ್ ದೇಶೀಯವೇದಿ ಕಾರ್ಯಕರ್ತರನ್ನು ಸಂಪರ್ಕಿಸಿ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಸಂದೇಶ ನೀಡಿದಾಗ ಅದರ ಮಾಲಕನಿಗೆ ಮಾಹಿತಿ ಲಭಿಸಿದ್ದು, ಕೂಡಲೇ ಅವರು ಮುಮ್ತಾಸ್‌ರನ್ನು ಸಂಪರ್ಕಿಸಿದ್ದರು. ಮೊಗ್ರಾಲ್ ಪುತ್ತೂರು ಕೋಟೆಗುಡ್ಡೆ ನಿವಾಸಿಯಾದ ಉಪ್ಪಳ ಜಿಎಚ್‌ಎಸ್‌ಎಸ್‌ನ ಪ್ಲಸ್‌ವನ್ ವಿದ್ಯಾರ್ಥಿನಿ ಖದೀಜತ್‌ಹನರದ್ದಾಗಿದೆ ಈ ಬ್ರೇಸ್‌ಲೆಟ್. ಇದನ್ನು ಯುನಾನಿ ಡಿಸ್ಪೆನ್ಸರಿಯಲ್ಲಿ ಖದೀಜತ್ ಹನರಿಗೆ ಹಿಂತಿರುಗಿಸಲಾಗಿದೆ. ಈ ವೇಳೆ ಆಸ್ಪತ್ರೆಯ ಡಾ| ಶಕೀರಲಿ, ಜೋಸ್ ಎಂ.ಎಸ್, ಡಾ| ರೈಹಾನತ್, ಮೊಗ್ರಾಲ್ ದೇಶೀಯವೇದಿ ಕಾರ್ಯಕರ್ತರಾದ ಮೊಹಮ್ಮದ್ ಅಬ್ಕೊ, ಟಿ.ಕೆ. ಅನ್ವರ್ ಮೊದಲಾದವರು ಭಾಗವಹಿಸಿದರು.

RELATED NEWS

You cannot copy contents of this page