ಪ್ರತಾಪನಗರ ನಿವಾಸಿ ಲಕ್ಷ್ಮಣ್‌ದಾಸ್ ಅಸೌಖ್ಯದಿಂದ ನಿಧನ

ಮಂಗಲ್ಪಾಡಿ : ಪ್ರತಾಪನಗರ ನಿವಾಸಿ ದಿ| ಸೀನ ದಾಸ್ ರವರ ಪುತ್ರ ಲಕ್ಷ್ಮಣ್‌ದಾಸ್ (54) ನಿಧನ ಹೊಂದಿ ದರು. ಅಸೌಖ್ಯ ದಿಂದ ಬಳಲುತ್ತಿದ್ದ ಇವರನ್ನು ಗುರುವಾರ ಸಂಜೆ ಉಪ್ಪಳದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸ ಲಾಗಿತ್ತು. ಶುಕ್ರವಾರ ಬೆಳಿಗ್ಗೆ ಉಲ್ಬಣ ಗೊಂಡಿದ್ದು, ದೇರಳಕಟ್ಟೆ ಆಸ್ಪತ್ರೆಗೆ ಸಾಗಿಸುವ ಮಧ್ಯೆ ನಿಧನ ಹೊಂದಿದರು. ಜಾತ್ರೆಯ ವೇಳೆ ಸಂತೆ ನಡೆಸುತ್ತಿದ್ದರು. ಮೃತರು ತಾಯಿ ಕಾವೇರಿ, ಪತ್ನಿ ಸುಶೀಲ, ಮಕ್ಕಳಾದ ಅಶೋಕ, ಅಭಿಷೇಕ್, ಸೊಸೆ ನವ್ಯ, ಸಹೋದರ ಜನಾರ್ದನ ಹಾಗೂ ಅಪಾರ ಬಂಧು- ಬಳಗವನ್ನು ಅಗಲಿದ್ದಾರೆ. ಮನೆಗೆ ಸಂಘ ಪರಿವಾ ರದ ಮುಖಂಡರು, ಕಾರ್ಯಕರ್ತರ ಸಹಿತ ಹಲವು ಮಂದಿ ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದರು.

You cannot copy contents of this page