ಬದಿಯಡ್ಕ: ನೀರ್ಚಾಲಿನಲ್ಲಿರುವ ಬೇಳ ಗ್ರಾಮ ಕಚೇರಿಯಿಂದ ಕಳವಿಗೀಡಾದ ಲ್ಯಾಪ್ಟಾಪ್ಗಳು ಸಮೀಪದ ಪೊದೆಗಳೆಡೆಯಲ್ಲಿ ಉಪೇಕ್ಷಿತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕಳೆದ ಸೋಮವಾರ ರಾತ್ರಿ ಗ್ರಾಮ ಕಚೇರಿಯ ಬಾಗಿಲಿನ ಬೀಗ ಮುರಿದು ಒಳನುಗ್ಗಿದ ಕಳ್ಳರು ಮೂರು ಲ್ಯಾಪ್ಟಾಪ್ಗಳನ್ನು ಕಳವು ನಡೆಸಿದ್ದರು. ಮಂಗಳವಾರ ಬೆಳಿಗ್ಗೆ ಕಚೇರಿಗೆ ನೌಕರರು ಆಗಮಿಸಿದಾಗ ಬಾಗಿಲಿನ ಬೀಗ ಮುರಿದಿರುವುದು ಕಂಡುಬಂದಿದೆ. ಈ ಬಗ್ಗೆ ಗ್ರಾಮಾಧಿ ಕಾರಿ ಶಶಿಕುಮಾರ್ ನೀಡಿದ ದೂರಿನಂತೆ ಬದಿಯಡ್ಕ ಪೊಲೀಸರು ತಲುಪಿ ಪರಿಶೀಲನೆ ನಡೆಸಿದಾಗ ಲ್ಯಾಪ್ಟಾಪ್ಗಳು ಕಳವಿಗೀಡಾದ ಬಗ್ಗೆ ತಿಳಿದುಬಂದಿದೆ. ಅನಂತರ ನಡೆಸಿದ ತಪಾಸಣೆ ವೇಳೆ ಲ್ಯಾಪ್ಟಾಪ್ಗಳು ಸಮೀಪದ ಪೊದೆಗಳೆಡೆಯಿಂದ ಪತ್ತೆಹಚ್ಚಲಾಗಿದೆ. ಇದೇ ವೇಳೆ ಆರೋಪಿಗಳ ಕುರಿತು ಸೂಚನೆ ಲಭಿಸಿಲ್ಲ. ಆರೋಪಿಗಳನ್ನು ಪತ್ತೆಹಚ್ಚಲು ಸಮೀಪದ ಸಿಸಿ ಟಿವಿ ದೃಶ್ಯಗಳನ್ನು ಸಂಗ್ರಹಿಸಿ ತನಿಖೆ ಮುಂದುವರಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.






