ಕುತ್ಯಾಳ ಶ್ರೀ ಗೋಪಾಲಕೃಷ್ಣ ಯಕ್ಷಗಾನ ತರಬೇತಿ ಕೇಂದ್ರದ ರಜತರಂಗ ಕಾರ್ಯಕ್ರಮಕ್ಕೆ ಚಾಲನೆ

ಕಾಸರಗೋಡು:  ಕೂಡ್ಲು  ಕುತ್ಯಾಳ ಶ್ರೀ ಗೋಪಾಲಕೃಷ್ಣ ಯಕ್ಷಗಾನ ತರಬೇತಿ ಕೇಂದ್ರದ ರಜತ ಮಹೋತ್ಸವ  ಸರಣಿ ಕಾರ್ಯಕ್ರಮದ ಸಮಾರೋಪ ಸಮಾರಂಭ  ‘ರಜತರಂಗ’  ಕುತ್ಯಾಳ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಕೂಡ್ಲು  ಸುಬ್ರಾಯ ಶ್ಯಾನುಭಗ್ ವೇದಿಕೆಯಲ್ಲಿ ಇಂದು ಬೆಳಿಗ್ಗೆ ಆರಂಭ ಗೊಂಡಿತು.  ಕಾರ್ಯಕ್ರಮಕ್ಕೆ  ಕ್ಷೇತ್ರ ಅರ್ಚಕ ಸೂರ್ಯನಾರಾಯಣ ಅಡಿಗರು ದೀಪ ಪ್ರಜ್ವಲಿಸಿ ಚಾಲನೆ ನೀಡಿದರು. ರಜತರಂಗದ ಅಧ್ಯಕ್ಷ ಡಾ| ಹರಿಕಿರಣ ಬಂಗೇರ, ಯಕ್ಷಗಾನ ತರ ಬೇತಿ ಕೇಂದ್ರದ ಅಧ್ಯಕ್ಷ ಚಂದ್ರಮೋಹನ ಕೂಡ್ಲು, ಕಾರ್ಯದರ್ಶಿ ಹರಿನಾರಾ ಯಣ ಮಯ್ಯ ಕುಂಬಳೆ, ತರಬೇತಿ ಕೇಂದ್ರದ ಕಾರ್ಯದರ್ಶಿ ಕಿಶೋರ್ ಕೂಡ್ಲು, ಕೋಶಾಧಿಕಾರಿ ವಿಘ್ನೇಶ ಕಾರಂತ, ತರಬೇತಿ ಕೇಂದ್ರದ ಹಿರಿಯ ಸದಸ್ಯ ಕೆ.ಎನ್. ವೆಂಕಟ್ರಮಣ ಹೊಳ್ಳ,  ಕ್ಷೇತ್ರದ ಆನುವಂಶಿಕ ಮೊಕ್ತೇಸರ ಕೆ.ಜಿ. ಶ್ಯಾನುಭೋಗ್, ಸಮಿತಿಯ ಪದಾಧಿ ಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.    ಮಧ್ಯಾಹ್ನ 12.15ರಿಂದ ತರಬೇತಿ ಕೇಂದ್ರದ ಸದಸ್ಯರಿಂದ ‘ಮಾಗಧವಧೆ’ ತಾಳಮದ್ದಳೆ, ಅಪರಾಹ್ನ 3.30ರಿಂದ ಯಕ್ಷ-ಗಾನ-ವೈಭವ, ಸಂಜೆ 6ರಿಂದ ತರಬೇತಿ ಕೇಂದ್ರದ ಸದಸ್ಯರಿಂದ ‘ಸಂಪೂರ್ಣ ಶ್ರೀ ದೇವಿ ಮಹಾತ್ಮೆ’ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.

ನಾಳೆ ಬೆಳಿಗ್ಗೆ 9.15ಕ್ಕೆ ದೀಪಪ್ರಜ್ವಲನೆ, 9.30ಕ್ಕೆ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ‘ಇಂದ್ರತಂತ್ರ-ಪ್ರಹ್ಲಾದ ಶಾಪ’ ತಾಳಮದ್ದಳೆ, ಮಧ್ಯಾಹ್ನ 12.30ಕ್ಕೆ  ‘ವೀರ ಬಬ್ರುವಾಹನ’ ಪ್ರಸಂಗದಲ್ಲಿ ನೂತನ ತಂಡದ ರಂಗಪ್ರವೇಶ ನಡೆಯಲಿದೆ. 2.30ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ, ಕೊಂಡೆವೂರು ಕ್ಷೇತ್ರ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ, ತಂತ್ರಿವರ್ಯ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರರು ಆಶೀರ್ವಚನ ನೀಡುವರು.  ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಟಿ. ಶ್ಯಾಮ್ ಭಟ್ ಅಧ್ಯಕ್ಷತೆ ವಹಿಸುವರು.  ಧರ್ಮದರ್ಶಿ ಹರಿಕೃಷ್ಣ ಪುನರೂರು, ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ್ ಕುಮಾರ್ ಕಲ್ಕೂರ, ಉದ್ಯಮಿ  ಅಗರಿ ರಾಘವೇಂದ್ರ ರಾವ್, ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಸತೀಶ ಅಡಪ್ಪ ಸಂಕಬೈಲು,  ಆಯುರ್ವೇದ ವೈದ್ಯಾಧಿಕಾರಿ ಡಾ| ಜಯಶ್ರೀ ನಾಗರಾಜ್, ಮಧೂರು ಪಂ. ಉಪಾಧ್ಯಕ್ಷ ಭಾನುಪ್ರಕಾಶ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಕೆ. ದಿನೇಶ್ ಮುಖ್ಯ ಅತಿಥಿಗಳಾಗಿರುವರು. ಈ ಸಂದರ್ಭದಲ್ಲಿ  ಪವನ್ ಕೆ.ವಿ (ಶಿವ ಡೆಕೊರ್ ಮಂಗಳೂರು), ಕೀರ್ತನ್ ಎಂ.ಕೆ (ದೇ ಹಿತ್ ಜಿಮ್) ಎಂಬಿವರಿಗೆ ಯುವ ಉದ್ಯಮಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಧಾರ್ಮಿಕ ಮುಂದಾಳು ಕೆ.ಎನ್. ವೆಂಕಟ್ರಮಣ ಹೊಳ್ಳರಿಗೆ ಸರ್ವಕ್ಷೇತ್ರ ವಿಶೇಷ ಸಾಧಕ ಪ್ರಶಸ್ತಿ ಪ್ರದಾನಗೈದು ಗೌರವಿಸ ಲಾಗುವುದು.  ಕುತ್ಯಾಳ ಕ್ಷೇತ್ರದ ಆನುವಂಶಿಕ ಮೊಕ್ತೇಸರ ಕೆ.ಜಿ. ಶ್ಯಾನುಭೋಗ್, ರಜತರಂಗದ ಅಧ್ಯಕ್ಷ ಡಾ| ಹರಿಕಿರಣ ಬಂಗೇರ, ಉಪಾಧ್ಯಕ್ಷ ವೇದಮೂರ್ತಿ ನಾಗೇಂದ್ರ ಭಟ್,  ಕೂಡ್ಲು ಮೇಳದ ವ್ಯವಸ್ಥಾಪಕ  ರವಿರಾಜ ಅಡಿಗ ಕೂಡ್ಲು,  ತರಬೇತಿ ಕೇಂದ್ರದ ಅಧ್ಯಕ್ಷ ಚಂದ್ರಮೋಹನ ಕೂಡ್ಲು ಉಪಸ್ಥಿತರಿರುವರು.  ಸ್ಮರಣ ಸಂಚಿಕೆ ಸಂಪಾದಕ ಸಾಹಿತಿ ರಾಧಾಕೃಷ್ಣ ಕೆ ಉಳಿಯತ್ತಡ್ಕ ಮಾತನಾಡುವರು.  ಹಿರಿಯ ಯಕ್ಷಗಾನ ಕಲಾವಿದ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ಶಿವರಾಮ ಜೋಗಿ ಬಿ.ಸಿ ರೋಡ್ ಅವರನ್ನು ಸನ್ಮಾನಿಸಲಾಗು ವುದು. ಮಾಂಬಾಡಿ ಸುಬ್ರಹ್ಮಣ್ಯ ಭಟ್, ದಿವಾಣ ಶಿವಶಂಕರ ಭಟ್, ಸಬ್ಬಣ ಕೋಡಿ ರಾಮ್ ಭಟ್, ಧರ್ಮೇಂದ್ರ ಆಚಾರ್ಯ ಬಾಯಾರು, ರಕ್ಷಿತ್ ಶೆಟ್ಟಿ ಪಡ್ರೆ, ಬಾಲಕೃಷ್ಣ ಆಚೆಗೋಳಿ, ರಂಜಿತ್ ಗೋಳಿಯಡ್ಕ, ಧರ್ಮೇಂದ್ರ ಆಚಾರ್ಯ ಬಾಯಾರು ಎಂಬಿವರಿಗೆ ಗುರುವಂದನೆ ನಡೆಯುವುದು. ಸಂಜೆ 5.30ರಿಂದ ಪುತ್ತೂರು ಶ್ರೀ ಮಹಾಲಿಂಗೇಶ್ವರ ಪ್ರವಾಸಿ ಯಕ್ಷಗಾನ ಮಂಡಳಿ ಹಾಗೂ ಅತಿಥಿ ಕಲಾವಿದ ರಿಂದ ‘ಶ್ರೀದೇವಿ ಲಲಿತೋಪಾಖ್ಯಾನ’ ಪ್ರದರ್ಶನಗೊಳ್ಳಲಿದೆ.

RELATED NEWS

You cannot copy contents of this page