ಕುಂಬಳೆ: ಕುಂಬಳೆ ಪೇಟೆಯ ಕುಂಬಳೆ- ಬದಿಯಡ್ಕ ಕೆಎಸ್‌ಟಿಪಿ ರಸ್ತೆಯಲ್ಲಿ ಪೊಲೀಸರು ನೋ ಪಾರ್ಕಿಂಗ್ ಬೋರ್ಡ್ ಇರಿಸಿದ ಸ್ಥಳದಲ್ಲಿಯೇ ಕೇರಳ ಸರಕಾರದ ಹೆಚ್ಚುವರಿ ಕಾನೂನು ಕಾರ್ಯದರ್ಶಿಯವರ ಕಾರು ನಿಲುಗಡೆಗೊಳಿಸಲಾಗಿದೆ. ಸಂಜೆ 4 ಗಂಟೆ ವೇಳೆ ದಟ್ಟಣೆ ಹೆಚ್ಚಿರುವ ಸ್ಥಳದಲ್ಲಿ ಕಾರನ್ನು ನಿಲ್ಲಿಸಿ ಅದರಲ್ಲಿದ್ದವರು ಹೊರ ಹೋಗಿದ್ದಾರೆ. ಕಾರಿನ ಮುಂಭಾಗ ಹಾಗೂ ಹಿಂಭಾಗದಲ್ಲಿ ‘ಅಡಿಶನಲ್ ಲಾ ಸೆಕ್ರೆಟರಿ’ ಎಂಬ ಬೋರ್ಡ್ ಇರಿಸಲಾಗಿದೆ. ಲಾ ಸೆಕ್ರೆಟರಿಯ ಪ್ರೈವೆಟ್ ಕಾರಾಗಿದೆ ಇದು. ಸಾರಿಗೆ ತಡೆ ಸೃಷ್ಟಿಸಿ ಪಾರ್ಕಿಂಗ್ ನಿಷೇಧಿತ ವಲಯದಲ್ಲಿ ಕಾರನ್ನು ನಿಲ್ಲಿಸಿರುವುದು ಕಾನೂನು ಇಲಾಖೆ ಅಧಿಕಾರಿಯಾಗಿದ್ದಾರೆಂಬುದು ಬೋರ್ಡ್‌ನಿಂದ ತಿಳಿದುಕೊಂಡ ಸ್ಥಳೀಯರು ಕಾನೂನು ಇಲಾಖೆ ಉನ್ನತ ಅಧಿಕಾರಿಗಳಿಗೆ ಕಾನೂನು ಅನ್ವಯವಲ್ಲವೇ? ಎಂದು ಪ್ರಶ್ನಿಸುತ್ತಿದ್ದಾರೆ.







