ಬಿಜೆಪಿಗೆ ಸಹಾಯ ಒದಗಿಸುವ ನಿಲುವನ್ನು ಎಲ್‌ಡಿಎಫ್ ಹೊಂದಿದೆ-ರಮೇಶ್ ಚೆನ್ನಿತ್ತಲ

ಕಾಸರಗೋಡು:  ಬಿಜೆಪಿಗೆ ಸಹಾಯವೊದಗಿಸುವ ನಿಲುವನ್ನು ಎಲ್‌ಡಿಎಫ್ ಹೊಂದಿದೆಯೆಂದು ಕಾಂಗ್ರೆಸ್‌ನ ಹಿರಿಯ ನಾಯಕ ರಮೇಶ್ ಚೆನ್ನಿತ್ತಲ ಹೇಳಿದ್ದಾರೆ. ಇಂದು ಬೆಳಿಗ್ಗೆ ಕಾಸರಗೋಡು ಪ್ರೆಸ್‌ಕ್ಲಬ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಯುಡಿಎಫ್‌ಗೆ ಶೇ. 40ರಷ್ಟು ಮತಗಳು ಲಭಿಸಿದ್ದವು. ಎಡರಂಗಕ್ಕೆ ಶೇ. 45ರಷ್ಟು ಮತ ಲಭಿಸಿದರೆ ಬಿಜೆಪಿಗೆ ಶೇ. 14ರಷ್ಟು ಮತಗಳು ಲಭಿಸಿತ್ತು. ಆದರೆ ನಂತರ ನಡೆದ ಚುನಾವಣೆಗಳಲ್ಲಿ ಬಿಜೆಪಿಗೆ ಲಭಿಸಿದ  ಮತಗಳ ಶೇಕಡಾವಾರು ೧೦ಕ್ಕೆ ಕುಸಿದಿದೆ. ಅಂದರೆ ಕಳೆದ ವಿಧಾನಸ ಭಾ ಚುನಾವಣೆಯಲ್ಲಿ ಬಿಜೆಪಿಯ ಈ 4 ಶೇ. ಮತಗಳು ಎಲ್‌ಡಿಎಫ್‌ಗೆ ಹೋಗಿ ಸೇರಿದೆಯೆಂಬುವುದು ಇದರಿಂದ ಸ್ಪಷ್ಟಗೊಳ್ಳುತ್ತಿದೆ.  ಬಿಜೆಪಿ ನೀಡಿದ ಆ ಕೊಡುಗೆಯ ಫಲವಾಗಿ ಪಿಣರಾಯಿ ನೇತೃತ್ವದ ಎಡರಂಗ ಸರಕಾರ ಸತತ ಎರಡನೇ ಬಾರಿಯೂ ಅಧಿಕಾರ ಕ್ಕೇರಲು ಸಾಧ್ಯವಾಯಿ ತೆಂದು ಚೆನ್ನಿತ್ತಲ ಹೇಳಿದ್ದಾರೆ. ಈಗ   ಬಿಜೆಪಿಗೆ ಸಹಾಯಕವಾಗುವ  ನಿಲುವನ್ನು  ಎಲ್‌ಡಿಎಫ್ ಅನುಸರಿಸುತ್ತಿದೆ. ಯುಡಿಎಫ್  ಅಲ್ಪ ಸಂಖ್ಯಾತರು ಮತ್ತು ಬಹುಸಂಖ್ಯಾತರನ್ನು ಸಮಾನವಾಗಿ ಪರಿಗಣಿಸುವ ಜಾತ್ಯಾತೀತ ರಾಜಕೀಯ ಒಕ್ಕೂಟವಾಗಿದೆ ಯೆಂದು ಅವರು ಹೇಳಿದರು.

RELATED NEWS

You cannot copy contents of this page