ಕುಂಬಳೆ: ಯುಡಿಎಫ್ನ ಪ್ರಧಾನ ಘಟಕ ಪಕ್ಷಗಳಾದ ಕಾಂಗ್ರೆಸ್ ಹಾಗೂ ಮುಸ್ಲಿಂ ಲೀಗ್ ಮಧ್ಯೆ ಮತ್ತು ಲೀಗ್ನವರ ಮಧ್ಯೆ ತೀವ್ರ ಪೈಪೋಟಿ ನಡೆಯುವ ಕುಂಬಳೆ ಪಂಚಾಯತ್ನ ಲೀಗ್ ಕೋಟೆಯಾದ ಕೊಡ್ಯಮ್ಮೆ ೯ನೇ ವಾರ್ಡ್ನಲ್ಲಿ ಲೀಗ್ ಅಭ್ಯರ್ಥಿಗಳಿಗೆ ಭಾರೀ ಸವಾಲೊಡ್ಡಿ ಒಂದು ವಿಭಾಗ ಲೀಗ್ ಕಾರ್ಯಕರ್ತರು ಪಕ್ಷದ ಸಕ್ರಿ ಯ ಕಾರ್ಯಕರ್ತನನ್ನು ಕಣಕ್ಕಿಳಿಸಿದ್ದಾರೆ.
ಕಳೆದ ಚುನಾವಣೆಯಲ್ಲಿ ಇಲ್ಲಿ ಎಡರಂಗಕ್ಕೆ ಲಭಿಸಿದ ಗೆಲುವು ಲೀಗ್ ನಾಯಕತ್ವವನ್ನು ಬೆಚ್ಚಿಬೀಳಿಸಿತ್ತು. ಈಬಾರಿ ಸ್ವಂತ ಕೋಟೆಯನ್ನು ವಶಪಡಿಸಿಕೊಳ್ಳಲು ಪಕ್ಷದ ಪ್ರಬಲನಾದ ಅಬ್ಬಾಸ್ ಕೊಡ್ಯಮ್ಮೆ ಅವರನ್ನು ಕಣಕ್ಕಿಳಿಸುವುದರೊಂದಿಗೆ ಒಂದು ವಿಭಾಗದ ಕಾರ್ಯಕರ್ತರು ಪಕ್ಷದ ಸಕ್ರಿಯ ಕಾರ್ಯಕರ್ತನಾದ ಅಬ್ದುಲ್ ಸಲಾಂರನ್ನು ಚುನಾವಣಾ ಸ್ಪರ್ಧಾಕಣಕ್ಕಿಳಿಸಿದ್ದಾರೆ. ಅಬ್ದುಲ್ ಸಲಾಂ ಅವರು ಎ.ಪಿ ವಿಭಾಗದ ಸಕ್ರಿಯ ಕಾರ್ಯಕರ್ತನಾಗಿದ್ದಾರೆಂದು ಹೇಳಲಾಗುತ್ತಿದೆ. ಈ ವಿಭಾಗಕ್ಕೆ ಈ ವಾರ್ಡ್ನಲ್ಲಿ ಭಾರೀ ಸ್ವಾಧೀನವಿದೆ ಯೆಂದು ಹೇಳಲಾಗುತ್ತಿದೆ. ಅಲ್ಲದೆ ಎಸ್ಡಿಪಿಐ ಸಲಾಂರಿಗೆ ಬೆಂಬಲ ವ್ಯಕ್ತಪಡಿಸಿರುವುದಾಗಿಯೂ ಹೇಳಲಾಗುತ್ತಿದೆ. ಇಬ್ಬರು ಅಭ್ಯರ್ಥಿ ಗಳು ವಾರ್ಡ್ನಲ್ಲಿ ಮತಯಾಚನೆ ಆರಂಭಿಸುವುದರೊಂದಿಗೆ ಚುನಾವಣಾ ಕಾವು ತಾರಕಕ್ಕೇರಿದೆ. ಮತದಾರರನ್ನು ಭೇಟಿಯಾಗು ವುದರಲ್ಲಿ ಇವರು ತೋರಿಸುತ್ತಿರುವ ಪೈಪೋಟಿ ನಾಗರಿಕರಲ್ಲಿ ಹುಮ್ಮಸ್ಸು ಮೂಡಿಸಿದೆ. ಮುಸ್ಲಿಂಲೀಗ್ 5 ಅಥವಾ 6 ಮಂದಿಯ ಗುಂಪಾಗಿ ಬದಲಾಗಿರುವುದರಿಂದ ರೋಷ ಗೊಂಡು ತಾನು ಅಭ್ಯರ್ಥಿಯಾಗಿದ್ದೇ ನೆಂದು ಸಲಾಂ ಹೇಳುತ್ತಿದ್ದಾರೆ. ಈ ಗುಂಪಿನ ಹಿತಾಸಕ್ತಿ ಮಾತ್ರವೇ ಲೀಗ್ ನ ಹೆಸರಲ್ಲಿ ನಡೆಯುತ್ತಿದೆ. ಇದನ್ನು ಮುಂದುವರಿಸಲು ಅವಕಾಶ ನೀಡಕೂಡದು. ಅದಕ್ಕಿರುವ ಮುನ್ನೆಚ್ಚ ರಿಕೆಯಾಗಿದೆ ತನ್ನ ಸ್ಪರ್ಧೆಯೆಂದು ಸಲಾಂ ತಿಳಿಸಿದ್ದಾರೆ. ಅಬ್ದುಲ್ ಸಲಾಂರ ಅಭ್ಯರ್ಥಿತನ ಲೀಗ್ಗೆ ಬೆದರಿಕೆಯಾಗಿರುವುದಾಗಿಯೂ ಹೇಳಲಾಗುತ್ತಿದೆ. ಇದೇ ವಾರ್ಡ್ನಲ್ಲಿ ಸಿಪಿಎಂ ಹಾಗೂ ಬಿಜೆಪಿ ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿದ್ದಾರೆ.






