ಕಾಸರಗೋಡು: ಕಾಸರಗೋಡಿನ ಸಮಗ್ರ ಅಭಿವೃದ್ಧಿ ಗುರಿಯಿರಿಸಿ ನಗರದ ಅಭಿವೃದ್ಧಿಗೆ ಪ್ರಾಮುಖ್ಯತೆ ನೀಡುವ ವಿವಿಧ ಅಭಿವೃದ್ಧಿ ವಿಷಯಗಳನ್ನು ಅಳವಡಿಸಿ ಕಾಸರಗೋಡು ನಗರಸಭಾ ಮುಸ್ಲಿಂ ಯೂತ್ಲೀಗ್ ಸಮಿತಿ ಸಿದ್ಧಪಡಿಸಿದ ವಿಷನ್ ಕಾಸರಗೋಡು ಎಂಬ ಆಶಯ ದಾಖಲೆಯನ್ನು ಶಾಸಕ ಕಲ್ಲಟ್ರ ಮಾಹಿನ್ ರಿಗೆ ಹಸ್ತಾಂತರಿಸಲಾಗಿದೆ. ನಗರದ ಮೂಲಭೂತ ಸೌಕರ್ಯ ಅಭಿವೃದ್ಧಿ, ಸಾರಿಗೆ ವ್ಯವಸ್ಥೆ, ರಸ್ತೆಗಳು, ಪ್ರವಾಸೋ ಧ್ಯಮ, ಪಾರ್ಕ್ಗಳು, ವ್ಯಾಪಾರ ವಾಣಿಜ್ಯ ಅಭಿವೃದ್ಧಿ, ಶಿಕ್ಷಣ ಮೊದಲಾದ ವಿವಿಧ ವಲಯಗಳನ್ನು ಪರಿಗಣಿಸುವ ನಿರ್ದೇ ಶಗಳನ್ನು ಇದರಲ್ಲಿ ಒಳಪಡಿಸಲಾಗಿದೆ.







