ಕಾಸರಗೋಡು: ಮುಸ್ಲಿಂ ಲೀಗ್ ಕೇಂದ್ರ ಪ್ರಧಾನ ಕಾರ್ಯ ದರ್ಶಿ ಪಿ.ಕೆ. ಕುಂಞಾಲಿಕುಟ್ಟಿ ನಾಳೆ ಕಾಸರಗೋಡಿಗೆ ಆಗಮಿಸಿ, ಯುಡಿಎಫ್ ಪರ ಜಿಲ್ಲೆಯ ಹಲವೆಡೆಗಳಲ್ಲಿ ನಡೆಯಲಿರುವ ಚುನಾವಣಾ ಪ್ರಚಾರ ಸಭೆಗಳಲ್ಲಿ ಭಾಗವಹಿಸುವರು.
ನಾಳೆ ಬೆಳಿಗ್ಗೆ 10.30ಕ್ಕೆ ಕಾಸರಗೋಡು ಮುನಿಸಿಪಲ್ ಕಾನ್ಫರೆನ್ಸ್ ಹಾಲ್‌ನಲ್ಲಿ ನಡೆಯಲಿರುವ ವಕ್ಫ್ ಸೆಮಿನಾರ್, 12 ಗಂಟೆಗೆ ತೆಕ್ಕಿಲ್‌ನಲ್ಲಿ ನಡೆಯುವ ಕುಟುಂಬ ಸಂಗಮ, ಪಳ್ಳಿಕ್ಕಾಲ್, ಹೊಸದುರ್ಗ ಮತ್ತು ಚೆರ್ವತ್ತೂರಿನಲ್ಲಿ ನಡೆಯುವ ಹಲವು ಚುನಾವಣಾ ಪ್ರಚಾರಗಳಲ್ಲ್ಲೂ ಅವರು ಭಾಗವಹಿಸುವರು.







