ಪುತ್ತಿಗೆ: ಜಿಲ್ಲಾ ಪಂಚಾಯತ್ ಪುತ್ತಿಗೆ ಡಿವಿಶನ್‌ನ ಎಡರಂಗದ ಅಭ್ಯರ್ಥಿಯ ಪರ್ಯಟನೆಯನ್ನು ಬಾಡೂರಿನಲ್ಲಿ ಶಾಸಕ ಸಿ.ಎಚ್. ಕುಂಞಂಬು ಉದ್ಘಾಟಿಸಿದರು. ಕೆ.ಎ. ಮೊಹಮ್ಮದ್ ಹನೀಫ್, ಪಿ. ರಘುದೇವನ್, ಶಿವಪ್ಪ ರೈ, ಶಂಕರ ರೈ, ವಿಠಲ ರೈ, ಬಶೀರ್ ಕೊಟ್ಟೂಡಲ್, ಅಬ್ದುಲ್ ಹಕೀಂ, ತಾಜುದ್ದೀನ್ ಮೊಗ್ರಾಲ್, ಡಿ.ಎನ್. ರಾಧಾಕೃಷ್ಣನ್, ಅನಿತಾ ಬಾಡೂರು, ಸಂತೋಷ್ ಕುಮಾರ್ ಮಾತನಾಡಿದರು. ಬಾಡೂರಿನಿಂದ ಆರಂಭಿಸಿದ ಜಾಥಾ ಕಣ್ಣೂರಿನಲ್ಲಿ ಸಮಾಪ್ತಿಗೊಂಡಿದೆ. ಸಮಾರೋಪವನ್ನು ಸಿಪಿಎಂ ಕುಂಬಳೆ ಏರಿಯಾ ಕಾರ್ಯದರ್ಶಿ ಸಿ.ಎ. ಸುಬೈರ್ ಉದ್ಘಾಟಿಸಿದರು.







