ಮಧೂರು: ಎಡರಂಗದ ಮಧೂರು ಪಂಚಾಯತ್ ಚುನಾವಣೆ ಸಭೆಯಲ್ಲಿ ವಿವಿಧ ಪಕ್ಷಗಳಿಗೆ ರಾಜೀನಾಮೆ ನೀಡಿ ಸಿಪಿಎಂಗೆ ಸೇರಿದವರಿಗೆ ಸ್ವಾಗತ ನೀಡಲಾಯಿತು. ಉಳಿಯತ್ತಡ್ಕದಲ್ಲಿ ನಡೆದ ಸಭೆಯನ್ನು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಎಂ. ರಾಜಗೋಪಾಲನ್ ಉದ್ಘಾಟಿಸಿದರು. ಕಿಶೋರ್ ಅಧ್ಯಕ್ಷತೆ ವಹಿಸಿದರು. ಮುಖಂಡರಾದ ವಿ.ಪಿ.ಪಿ. ಮುಸ್ತಫ, ಟಿ.ಕೆ. ರಾಜನ್, ಬಿಜು ಉಣ್ಣಿತ್ತಾನ್, ಟಿ.ಎಂ.ಎ. ಕರೀಂ, ಹಸೈನಾರ್, ಎಂ. ಸುಮತಿ, ಕೆ. ರವೀಂದ್ರನ್, ಭುಜಂಗ ಶೆಟ್ಟಿ, ಕೆ. ಜಯಚಂದ್ರನ್ ಮಾತನಾಡಿದರು. ಎಂ.ಕೆ. ರವೀಂದ್ರನ್ ಸ್ವಾಗತಿಸಿದರು.







