ಉಪ್ಪಳ: ಮಂಗಲ್ಪಾಡಿ ಮಂಡಲ ಕಾಂಗ್ರೆಸ್ ಸಮಿತಿ ಸಭೆಯನ್ನು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸೋಮಶೇಖರ್ ಜೆ.ಎಸ್. ಉದ್ಘಾಟಿಸಿದರು. ಅವರು ಮಾತನಾಡಿ, ಕೋಮುಶಕ್ತಿಗಳ ಬೆಂಬಲದೊಂದಿಗೆ ಕೀಳುತಂತ್ರದ ಮೂಲಕ ಅಧಿಕಾರಕ್ಕೇರಿದ ಎಡರಂಗ ಜನರ ಹೃದಯದಿಂದ ಶಾಶ್ವತವಾಗಿ ಮರೆಯಾಗುವ ಹಂತದಲ್ಲಿದೆ. ಕಾರ್ಮಿಕರು, ಕೃಷಿಕರು, ಭೂರಹಿತರು ಮುಂತಾದವರಿಗಾಗಿ ಹೋರಾಟ ನಡೆಸುತ್ತಿದ್ದ ಸಿಪಿಎಂ ಈಗ ಶೋಷಕರಾಗಿ ಮಾರ್ಪಟ್ಟದ್ದು ವಿಷಾದನೀಯವೆಂದು ಅವರು ನುಡಿದರು.
ಸಿಪಿಎಂ ಹಾಗೂ ಬಿಜೆಪಿಯನ್ನು ತೊರೆದು ಕಾಂಗ್ರೆಸ್‌ಗೆ ಸೇರ್ಪಡೆಯಾಗು ತ್ತಿರುವುದು ಕಾಂಗ್ರೆಸ್‌ನ ಉಚ್ಛ್ರಾಯ ಸ್ಥಿತಿಗೆ ಉದಾಹರಣೆಯಾಗಿದೆ ಎಂದು ಅವರು ನುಡಿದರು.
ಸಿಪಿಎಂ ಕಾರ್ಯಕರ್ತರಾದ ಹನೀಫ್ ವರ್ಕಾಡಿ ಮುಟ್ಟಂ, ಹಮೀದ್ ಮುಟ್ಟಂ, ಭಾಗೀರಥಿ ಸುಂದರ ಶಿರಿಯರನ್ನು ಕಾಂಗ್ರೆಸ್ ಪಕ್ಷಕ್ಕೆ ಇದೇ ವೇಳೆ ಅವರು ಸ್ವಾಗತಿಸಿದರು. ಬಾಬು ಬಂದ್ಯೋಡು ಅಧ್ಯಕ್ಷತೆ ವಹಿಸಿದರು. ಬ್ಲೋಕ್ ಕಾಂಗ್ರೆಸ್ ಅಧ್ಯಕ್ಷ ಮುಹಮ್ಮದ್ ಡಿಎಂಕೆ, ಫಾರೂಕ್ ಶಿರಿಯ, ಬರ್ನಾಡ್ ಡಿ ಅಲ್ಮೇಡಾ, ಮೊಹಮ್ಮದ್ ಸೀಗಂದಡಿ, ಪ್ರದೀಪ್ ಶೆಟ್ಟಿ, ಬಾಬು ಇಚ್ಲಂಗೋಡು, ಗೀತಾ ಬಂದ್ಯೋಡು, ತಾಹಿರಾ ಮಣಿಮುಂಡ, ಭಾಗೀರಥಿ ಸುಂದರ ಅಂಬಟೆಮೂಲೆ, ಶಶಿಧರ ಮುಟ್ಟಂ, ಇಬ್ರಾಹಿಂ ಹಾಜಿ ಇಚ್ಲಂಗೋಡು, ಯೂಸಫ್ ಮುಟ್ಟಂ, ಮೊಹಮ್ಮದ್ ಮೇರ್ಕಳ, ಶಿಹಾಬ್ ಎಂ.ಕೆ, ಇಸ್ಮಾಯಿಲ್ ಬೇಕೂರು, ರಾಜೇಶ್ ನಾಯ್ಕ್, ಬಾಲಕೃಷ್ಣ ಕುಲಾಲ್, ಜಬೀರ್ ಮುಟ್ಟಂ, ತುಳಸಿ ಶಿರಿಯ ಉಪಸ್ಥಿತರಿದ್ದರು. ಅಶ್ರಫ್ ಮುಟ್ಟಂ ಸ್ವಾಗತಿಸಿ, ಹುಸೈನ್ ಕುಬಣೂರು ವಂದಿಸಿದರು.