ಕಾಸರಗೋಡು: ಎಡರಂಗ ರಾಜ್ಯ ಸಮಿತಿ ನೇತೃತ್ವದಲ್ಲಿ ಉತ್ತರವಲಯ ಅಭಿವೃದ್ಧಿ ಮುನ್ನಡೆ ಜಾಥಾ ಫೆ.1ರಂದು ಸಂಜೆ 3 ಗಂಟೆಗೆ ಕುಂಬಳೆಯಿಂದ ಆರಂಭಗೊಳ್ಳಲಿದೆ. ಸಿಪಿಎಂ ರಾಜ್ಯ ಕಾರ್ಯದರ್ಶಿ ಎಂ.ವಿ. ಗೋವಿಂದನ್ ಮಾಸ್ತರ್ ಜಾಥಾ ನಾಯಕರಾಗಿರುವ ಯಾತ್ರೆಗೆ ಸಿದ್ಧತೆ ಪೂರ್ಣಗೊಂಡಿದ್ದು, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಉದ್ಘಾಟಿಸುವರು ಎಂದು ಈ ಬಗ್ಗೆ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಎಡರಂಗ ಸಂಚಾಲಕ ಕೆ.ಪಿ. ಸತೀಶ್ಚಂದ್ರನ್ ತಿಳಿಸಿದ್ದಾರೆ. ಸಿಪಿಐ ರಾಷ್ಟ್ರೀಯ ಎಕ್ಸಿಕ್ಯೂಟಿವ್ ಸದಸ್ಯ, ಸಂಸದ ಪಿ. ಸಂತೋಷ್ ಕುಮಾರ್ ಜಾಥಾ ಮೆನೇಜರ್ ಆಗಿರುವರು. ಮೊದಲ ದಿನದ ಪ್ರಚಾರ ನುಳ್ಳಿಪ್ಪಾಡಿಯಲ್ಲಿ ಸಮಾಪ್ತಿಗೊಳ್ಳಲಿದೆ. ಫೆ.೨ರಂದು ಬೆಳಿಗ್ಗೆ 10 ಗಂಟೆಗೆ ಪೆರಿಯಾಟಡ್ಕದಲ್ಲಿ, 3 ಗಂಟೆಗೆ ಕೋಟಚ್ಚೇರಿಯಲ್ಲಿ, 4 ಗಂಟೆಗೆ ಕಾಲಿಕಡವ್‌ನಲ್ಲಿ ಜಾಥಾಕ್ಕೆ ಸ್ವಾಗತ ನೀಡಲಾಗುವುದು. ಈ ಬಗ್ಗೆ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಮುಖಂಡರಾದ ಸಿ.ಪಿ. ಬಾಬು, ಕೆ.ಆರ್. ಜಯಾನಂದ, ಸಜಿ ಸೆಬಾಸ್ಟಿಯನ್, ವಿ.ವಿ. ಕೃಷ್ಣನ್, ಪಿ.ಟಿ. ನಂದಕುಮಾರ್, ಕರೀಂ ಚಂದೇರ, ರತೀಶ್ ಪುದಿಯಪುರಯಿಲ್, ಸಿ. ಬಾಲನ್, ಅಸೀಸ್ ಕಡಪ್ಪುರಂ, ಪಿ.ಪಿ. ರಾಜು ಭಾಗವಹಿಸಿದ್ದರು.






