ಬೋವಿಕ್ಕಾನ: ಅಲ್ಪ ಬಿಡುವಿನ ಬಳಿಕ ಇರಿಯಣ್ಣಿಯಲ್ಲಿ ಚಿರತೆಯ ಭೀತಿ ಹುಟ್ಟಿಕೊಂಡಿದೆ. ಶನಿವಾರ ರಾತ್ರಿ ಇರಿಯಣ್ಣಿ ಕುಣಿಯೇರಿ ಎಂಬಲ್ಲಿ ಸಾಕು ನಾಯಿಯನ್ನು ಚಿರತೆ ಕಚ್ಚಿ ಕೊಂಡೊಯ್ದಿರುವುದಾಗಿ ದೂರಲಾಗಿದೆ. ವೆಳ್ಳಾಟ್‌ನ ನಾರಾಯಣನ್ ಎಂಬವರ ಮನೆಯ ಸಾಕು ನಾಯಿಯನ್ನು ಚಿರತೆ ಕೊಂಡೊ ಯ್ದಿದ್ದು, ನಾಯಿಯ ಮೇಲೆ ಚಿರತೆ ದಾಳಿ ನಡೆಸುವ ದೃಶ್ಯ ಮನೆಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಸಮೀಪದ ಕಾಡಿನತ್ತ ನಾಯಿಯನ್ನು ಚಿರತೆ ಕೊಂಡೊ ಯ್ದಿದೆ ಎಂದು ತಿಳಿದುಬಂ ದಿದೆ. ಇತ್ತೀಚೆಗೆ ಮುಳಿಯಾರು ಪಂಚಾ ಯತ್‌ನ ಇರಿಯಣ್ಣಿ ಯಲ್ಲಿ ಹಲವು ನಾಯಿಗಳನ್ನು ಚಿರತೆಗಳು ಕೊಂದಿವೆ. ಕಾನತ್ತೂರು ಪಯರ್ ಪಳ್ಳದಲ್ಲೂ ಕಳೆದ ಅಕ್ಟೋಬರ್‌ನಲ್ಲಿ ಸಾಕು ನಾಯಿಯನ್ನು ಚಿರತೆ ಕೊಂದುಹಾಕಿತ್ತು. ಇದೀಗ ಮತ್ತೆ ಈ ಪ್ರದೇಶದಲ್ಲಿ ಚಿರತೆ ಕಾಣಿಸಿಕೊಂಡಿ ರುವುದು ಆತಂಕಕ್ಕೆ ಕಾರಣವಾಗಿದೆ.






