ಬಂದಡ್ಕ ಬಳಿ ನಾಯಿಮೇಲೆ ದಾಳಿ ನಡೆಸಿರುವುದು ಚಿರತೆ

ಬಂದಡ್ಕ:  ಮಾಣಿಮೂಲೆ ಕಣ್ಣಾಡಿತೋಡು ಬಳಿ  ಇತ್ತೀಚೆಗೆ  ಕಟ್ಟಿ ಹಾಕಿದ್ದ ಸಾಕು ನಾಯಿಯ ಮೇಲೆ ದಾಳಿ ನಡೆಸಿ ಗಾಯಗೊಳಿಸಿರುವುದು ಚಿರತೆಯೇ ಆಗಿದೆಯೆಂದು ದೃಢೀಕರಿಸಲಾಗಿದೆ.  ಬಂದಡ್ಕ ಸೆಕ್ಷನ್ ಫಾರೆಸ್ಟ್ ಆಫೀಸರ್ ಪಿ. ಶೇಷಪ್ಪ ಎಂಬಿವರು ಈ ಬಗ್ಗೆ ಖಚಿತಪಡಿಸಿದ್ದು, ಸಾರ್ವಜನಿಕರಿಗೆ ಜಾಗ್ರತಾ ನಿರ್ದೇಶ ಹೊರಡಿಸಿದ್ದಾರೆ.  ಕಟ್ಟಿ ಹಾಕಿದ ನಾಯಿ ಬೊಗಳುವ ಶಬ್ದ ಕೇಳಿ ಮನೆಯವರು ನೋಡಿದಾಗ ಚಿರತೆ ಓಡಿ ಹೋಗಿತ್ತು.  ಈ ಬಗ್ಗೆ ಮಾಹಿತಿ ಲಭಿಸಿದ ಅರಣ್ಯಾಧಿಕಾರಿಗಳು ಸ್ಥಳಕ್ಕೆ ತಲುಪಿ ಪರಿಶೀಲಿಸಿದಾಗ ನಾಯಿ ಮೇಲೆ ದಾಳಿ ನಡೆಸಿರುವುದು ಚಿರತೆಯಾಗಿದೆಯೆಂದು ತಿಳಿದುಬಂದಿದೆ. ಕಣ್ಣಾಡಿತೋಡು  ಕರ್ನಾಟಕ ಅರಣ್ಯಕ್ಕೆ ಹೊಂದಿಕೊಂ ಡಿರುವ ಪ್ರದೇಶವಾಗಿದೆ. ಆದ್ದರಿಂದ ಈ ಭಾಗದಲ್ಲಿ  ಚಿರತೆ ಬರುವ ಸಾಧ್ಯತೆ ಇದೆಯೆಂದು  ಅಂದಾಜಿಸಲಾಗಿದೆ. ಈ ಪ್ರದೇಶದಲ್ಲಿ ಅರಣ್ಯ ಇಲಾಖೆ ಗಸ್ತು ನಡೆಸಲಿದೆ. ಅಧಿಕಾರಿಗಳ  ನಿರ್ದೇಶವನ್ನು ಪಾಲಿಸುವಂತೆ ತಿಳಿಸಲಾಗಿದೆ

RELATED NEWS

You cannot copy contents of this page