ಕಾಸರಗೋಡು: ಪೆರಿಯಾದಲ್ಲಿ ರುವ ಕೇರಳ ಕೇಂದ್ರ ವಿಶ್ವವಿದ್ಯಾ ಲಯ ಕ್ಯಾಂಪಸ್‌ನಲ್ಲಿ ಚಿರತೆ ಮತ್ತೊಮ್ಮೆ ಕಾಣಿಸಿಕೊಂ ಡಿರುವುದಾಗಿ ವರದಿಯಾಗಿದೆ. ಇದೀಗ ಮತ್ತೆ ಚಿರತೆ ಕಂಡುಬಂ ದಿರುವುದಾಗಿ ವಿದ್ಯಾರ್ಥಿ ಗಳು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅರಣ್ಯಾಧಿಕಾರಿಗಳು ತಲುಪಿ ಪರಿಶೀಲನೆ ನಡೆಸಿದ್ದಾರೆ. ಆದರೆ ಚಿರತೆ ಕಂಡುಬಂದಿಲ್ಲ. ಪದೇ ಪದೇ ಚಿರತೆ ಕಂಡುಬರುತ್ತಿರುವುದರಿಂದ ವಿ.ವಿ. ಕ್ಯಾಂಪಸ್‌ನಲ್ಲಿ ಬೋನು ಇರಿಸುವ ಬಗ್ಗೆ ಅರಣ್ಯಾಧಿಕಾರಿಗಳು ಆಲೋ ಚಿಸುತ್ತಿದ್ದಾರೆ. ಇತ್ತೀಚೆಗೆ ಇಲ್ಲಿ ಚಿರತೆ ಕಂಡುಬಂದ ಬಗ್ಗೆ ತಿಳಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಕ್ಯಾಂಪಸ್‌ನಲ್ಲಿ ಕ್ಯಾಮರಾ ಅಳವಡಿಸಲಾಗಿತ್ತು. ಆದರೆ ಅದರಲ್ಲಿ ಚಿರತೆಯ ದೃಶ್ಯ ಸೆರೆಯಾಗಿಲ್ಲ. ಇದೇ ವೇಳೆ ಚಿರತೆಯದ್ದೆಂದು ಅಂದಾಜಿಸುವ ಕಾಲಿನಹೆಜ್ಜೆ ಗುರುತುಗಳು ಕ್ಯಾಂಪಸ್ ಪರಿಸರದಲ್ಲಿ ಪತ್ತೆಯಾಗಿರುವುದಾಗಿ ತಿಳಿದುಬಂದಿದೆ.
