ಪೆರಿಯ ಶಾಲಾ ಪರಿಸರದಲ್ಲಿ ಚಿರತೆ ಪ್ರತ್ಯಕ್ಷ: ಮುಂದುವರಿದ ಶೋಧ; ಬಾಲಕ ಸಂಭಾವ್ಯ ದಾಳಿಯಿಂದ ಅದೃಷ್ಟವಶಾತ್ ಪಾರು

ಕಾಸರಗೋಡು: ಪೆರಿಯ ಪೇಟೆಯಲ್ಲಿ ನಿನ್ನೆ ರಾತ್ರಿ ಚಿರತೆಯೊಂದು ಪ್ರತ್ಯಕ್ಷಗೊಂಡಿದೆ. ಪೆರಿಯ ಸಹಕಾರಿ ಬ್ಯಾಂಕ್‌ನಿಂದ  ಪೆರಿಯ ಹೈಯರ್ ಸೆಕೆಂಡರಿ ಶಾಲೆಗೆ ಹೋಗುವ ರಸ್ತೆ  ಸಮೀಪದ ಗೋಡೆಯ ಮೇಲೆ ಚಿರತೆ ಕಂಡುಬಂದಿದೆ. ಪೆರಿಯ ಕಲ್ಯೋಟ್‌ನಲ್ಲಿರುವ ಪೊಲೀಸ್ ಪಿಕೆಟ್ ಪೋಸ್ಟ್‌ನಲ್ಲಿ ಕರ್ತವ್ಯದಲ್ಲಿರುವ ಪೊಲೀಸರು ಅಲ್ಲೇ ಪಕ್ಕದ ಹೋಟೆಲ್‌ನಲ್ಲಿ ಆಹಾರ ಸೇವಿಸಿ ಹಿಂತಿರುಗುತ್ತಿದ್ದ ವೇಳೆ ಚಿರತೆ ಪತ್ತೆಯಾಗಿದೆ. ಆ  ಸಮಯದಲ್ಲಿ ಬಾಲಕನೋರ್ವ ನಡೆದುಹೋಗುತ್ತಿದ್ದು ಅದನ್ನು ಕಂಡ ಪೊಲೀಸರು ಬಾಲಕನನ್ನು ರಕ್ಷಿಸಿ ಸುರಕ್ಷಿ ತವಾಗಿ ಮನೆಗೆ ತಲುಪಿಸಿದರು. ಇದರಿಂದ  ಬಾಲಕ ಚಿರತೆ ದಾಳಿಯಿಂದ ಅದೃಷ್ಟವಶಾತ್ ಪಾರಾಗಿದ್ದಾನ.  ಚಿರತೆ ಶಾಲಾ ಪರಿಸರಕ್ಕೆ ಹೋಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಮತ್ತು ಊರವರು  ಆ ಪರಿಸರದಲ್ಲಿ ವ್ಯಾಪಕ ಶೋಧ ನಡೆಸಿದರೂ ಚಿರತೆಯನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ. ವಿಷಯ ತಿಳಿದ ಅರಣ್ಯಪಾಲಕರೂ ಸ್ಥಳಕ್ಕಾಗಮಿಸಿ  ಶೋಧ ಕಾರ್ಯಾಚರಣೆ ಮುಂದುವರಿಸಿದ್ದಾರೆ. ಶಾಲಾ ಪರಿಸರದಲ್ಲಿ ಚಿರತೆ ಪ್ರತ್ಯಕ್ಷಗೊಂಡಿರುವುದರಿಂದ  ವಿದ್ಯಾರ್ಥಿಗಳು ಹಾಗೂ ಸ್ಥಳೀಯರಲ್ಲಿ ಭಯ ಉಂಟುಮಾಡಿದ.

ಚಿರತೆ ಕಂಡುಬಂದ ಹಿನ್ನೆಲೆಯಲ್ಲಿ  ಶಾಲೆ ಮತ್ತು ಪೆರಿಯಾದಲ್ಲಿರುವ ಕೇಂದ್ರೀಯ ವಿಶ್ವವಿದ್ಯಾಲಯ ಪರಿಸರದಲ್ಲಿ ಜಾಗ್ರತಾ ನಿರ್ದೇಶ ನೀಡಲಾಗಿದೆ. ರಾತ್ರಿ ವೇಳೆ ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ಹಾಸ್ಟೆಲ್‌ನಿಂದ ಹೊರಹೋಗಕೂಡದೆಂಬ ಕಠಿಣ ನಿರ್ದೇಶವನ್ನು ಕೇಂದ್ರೀಯ ವಿ.ವಿ  ಅಧಿಕಾರಿಗಳು ನೀಡಿದ್ದಾರೆ.

RELATED NEWS

You cannot copy contents of this page