ಕಾಸರಗೋಡು: ಪೆರಿಯ ಕೇಂದ್ರ ವಿಶ್ವವಿದ್ಯಾಲಯ ಸಮೀಪ ಮತ್ತೆ ಚಿರತೆಯ ಭೀತಿ ಉಂಟಾಗಿದೆ. ಇಲ್ಲಿನ ತನ್ನೋಟ್ ಭಾಗದಲ್ಲಿ ಚಿರತೆ ಕಂಡುಬಂದಿರುವುದಾಗಿ ತಿಳಿದುಬಂದಿದೆ. ವಿಷಯ ತಿಳಿದು ಆರ್‌ಆರ್‌ಟಿ ಸ್ಥಳಕ್ಕೆ ತಲುಪಿ ಶೋಧ ನಡೆಸಿದೆ ಈ ವೇಳೆ ಚಿರತೆಯ ಕಾಲಿನ ಹೆಜ್ಜೆಗಳ ಗುರುತು ಕಂಡುಬಂದಿದೆ. ಚಿರತೆ ಈ ಭಾಗಕ್ಕೆ ತಲುಪಿರುವುದಾಗಿ ಸೂಚನೆ ಲಭಿಸಿದ ಹಿನ್ನೆಲೆಯಲ್ಲಿ ಇಲ್ಲಿ ಕ್ಯಾಮರಾ ಸ್ಥಾಪಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಇದೇ ವೇಳೆ ಜಾಗ್ರತೆ ವಹಿಸುವಂತೆಯೂ ಅಧಿಕಾರಿಗಳು ಜನರಿಗೆ ಕರೆ ನೀಡಿದ್ದಾರೆ.
